Kamal Hassan: ಕಮಲ್ ಹಾಸನ್ ಗೆ ಈಗ ನೆನಪಾಯ್ತಾ ಕರ್ನಾಟಕ ಹೈಕೋರ್ಟ್

Krishnaveni K
ಮಂಗಳವಾರ, 3 ಜೂನ್ 2025 (09:44 IST)
ಬೆಂಗಳೂರು: ಥಗ್ ಲೈಫ್ ಸಿನಿಮಾಗೆ ಕರ್ನಾಟಕದಲ್ಲಿ ನಿಷೇಧದ ಭೀತಿ ಬೆನ್ನಲ್ಲೇ ನಟ ಕಮಲ್ ಹಾಸನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಕನ್ನಡಿಗರು ಈಗ ಕೋರ್ಟ್ ನೆನಪಾಯ್ತಾ ಎಂದು ಟ್ರೋಲ್ ಮಾಡಿದ್ದಾರೆ.

ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ವಿವಾದ ಸೃಷ್ಟಿಸಿದ್ದ ನಟ ಕಮಲ್ ಹಾಸನ್ ಗೆ ಈಗ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾಗೆ ನಿಷೇಧದ ಭೀತಿ ಎದುರಾಗಿದೆ. ಇಂದು ಮಧ್ಯಾಹ್ನ 12 ಗಂಟೆಯೊಳಗೆ ಕ್ಷಮೆ ಕೇಳದೇ ಇದ್ದರೆ ಚಿತ್ರಕ್ಕೆ ನಿಷೇಧ ಹೇರುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗಡುವು ನೀಡಿದೆ.

ಇದರ ಬೆನ್ನಲ್ಲೇ ಯಾವುದೇ  ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದಿರುವ ಕಮಲ್ ಹಾಸನ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಿನಿಮಾ ಬಿಡುಗಡೆಗೂ ಕಮಲ್ ಹಾಸನ್ ನೀಡಿರುವ ಹೇಳಿಕೆಗೂ ಯಾವುದೇ ಸಂಬಂಧವೂ ಇಲ್ಲ ಎಂದು ಥಗ್ ಲೈಫ್ ನಿರ್ಮಾಣ ಸಂಸ್ಥೆ ಕರ್ನಾಟಕ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದೆ.

ಅದರ ವಿಚಾರಣೆ ಇಂದು ನಡೆಯಲಿದೆ. ಇನ್ನು, ಯಾವುದೇ ರೀತಿಯ ಕಾನೂನು ಹೋರಾಟಕ್ಕೆ ಸರ್ಕಾರದ ಬೆಂಬಲವಿರಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿರುವುದು ವಾಣಿಜ್ಯ ಮಂಡಳಿಗೆ ಬಲ ಬಂದಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BB 12: ಕಿಚ್ಚ ಸುದೀಪ್ ಇದು ಸಾಕಗಲ್ಲ, ಇನ್ನೂ ಬೇಕು, ಇನ್ನೂ ಬೇಕು

ಜೈಲಿನಲ್ಲಿ ನಿಯಮದ ಪ್ರಕಾರ ಎಲ್ಲಾ ಕೊಟ್ಟರೂ ಇಲ್ಲ ಅಂದರಾ ದರ್ಶನ್

BBK12: ಕಿಚ್ಚ ಸುದೀಪ್ ಯಾರಿಗೂ ಹೆದರಲ್ಲ, ಅಶ್ವಿನಿ ಪರವೂ ಅಲ್ಲ: ಇಂದು ಕಾದಿದೆ ಮಾರಿಹಬ್ಬ

ಕೆಬಿಸಿ ಶೋನಲ್ಲಿ ರಿಷಬ್ ಶೆಟ್ಟಿ ಗೆದ್ದಿದ್ದೆಷ್ಟು, ಈ ಹಣ ಯಾರಿಗೆ ಕೊಟ್ರು ನೋಡಿ

ಕಲಾವಿದ ನಿತಿನ್ ಶೀವಾಂಶ್ ಜತೆ ಸುಹಾನಾ ಸೈಯ್ಯದ್‌ಗೆ ಪ್ರೀತಿ ಶುರುವಾಗಿದ್ದು ಹೇಗೇ ಗೊತ್ತಾ

ಮುಂದಿನ ಸುದ್ದಿ
Show comments