Webdunia - Bharat's app for daily news and videos

Install App

Kamal Hassan: ಕನ್ನಡಕ್ಕೆ ಹೇಗೆ ಗೌರವ ಕೊಡಬೇಕು ಎಂದು ಪವನ್ ಕಲ್ಯಾಣ್, ರಜನೀಕಾಂತ್ ನೋಡಿ ಕಲಿಯಿರಿ

Krishnaveni K
ಗುರುವಾರ, 29 ಮೇ 2025 (09:42 IST)
ಬೆಂಗಳೂರು: ಥಗ್ಸ್ ಆಫ್ ಲೈಫ್ ಮೂವಿ ಈವೆಂಟ್ ನಲ್ಲಿ ಕನ್ನಡದ ಬಗ್ಗೆ  ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್ ಗೆ ನೆಟ್ಟಿಗರು ಛಾಟಿ ಬೀಸಿದ್ದು, ಕನ್ನಡಕ್ಕೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಪವನ್ ಕಲ್ಯಾಣ್, ರಜನೀಕಾಂತ್ ರನ್ನು ನೋಡಿ ಕಲಿಯಿರಿ ಎಂದಿದ್ದಾರೆ.

ಇತ್ತೀಚೆಗೆ ಪವನ್ ಕಲ್ಯಾಣ್ ಸರ್ಕಾರೀ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ತಮ್ಮ ಭಾಷಣದ ಆರಂಭದಲ್ಲೇ ಅವರು ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ಹೇಳಿ ಕನ್ನಡದಲ್ಲೇ ಮಾತು ಆರಂಭಿಸಿದ್ದರು. ಆ ಮೂಲಕ ಕನ್ನಡ ಭಾಷೆಗೆ ಗೌರವ ನೀಡಿದ್ದರು.

ಇದನ್ನು ಸೂಪರ್ ಸ್ಟಾರ್ ರಜನೀಕಾಂತ್ ಕೂಡಾ ಮೂಲತಃ ಕನ್ನಡಿಗರೇ. ಅವರು ಬೆಂಗಳೂರಿಗೆ ಆಗಾಗ ಬರುತ್ತಿರುತ್ತಾರೆ. ಬಂದಾಗಲೆಲ್ಲಾ ಅವರು ಸ್ಥಳೀಯರೊಂದಿಗೆ ಕನ್ನಡದಲ್ಲೇ ಮಾತನಾಡುತ್ತಾರೆ. ಕಾರ್ಯಕ್ರಮಗಳಲ್ಲೂ ಕನ್ನಡವನ್ನೇ ಮಾತನಾಡುತ್ತಾರೆ. ಕನ್ನಡದಿಂದ ಹೋದ ಬಹುತೇಕ ಕಲಾವಿದರು ಈಗಲೂ ಕನ್ನಡದ ಬಗ್ಗೆ ಅಭಿಮಾನವಿಟ್ಟುಕೊಂಡಿದ್ದಾರೆ.

ಆದರೆ ಕಮಲ್ ಹಾಸನ್ ಬಣ್ಣ ಹಚ್ಚಿದ್ದು ಕನ್ನಡ ಸಿನಿಮಾ ಮೂಲಕವೇ. ಬಳಿಕ ಅವರು ತಮಿಳು ಚಿತ್ರರಂಗದಲ್ಲಿ ಮಿಂಚಿದರು. ಹಾಗಿದ್ದರೂ ಅವರು ಈಗ ತಮಿಳಿನಿಂದ ಕನ್ನಡ ಹುಟ್ಟಿದ್ದು ಎನ್ನುವ ಮೂಲಕ ಕನ್ನಡಕ್ಕೇ ಅವಮಾನ ಮಾಡಿದ್ದಾರೆ. ಕಮಲ್ ಕನ್ನಡಕ್ಕೆ ಹೇಗೆ ಗೌರವ ಕೊಡಬೇಕು ಎಂಬುದನ್ನು ರಜನಿ, ಪವನ್ ನೋಡಿ ಕಲಿಯಬೇಕು ಎಂದು ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿಜಿಪಿ ಹುದ್ದೆಗೆ ಮರಳಿದ ನಟಿ ರನ್ಯಾ ರಾವ್‌ ಮಲ ತಂದೆಗೆ ಬಿಗ್‌ ಶಾಕ್‌

ಕೇರಳ ಕಾಂಗ್ರೆಸ್ ಯುವ ನಾಯಕನ ಮೇಲೆ ಇದೆಂಥಾ ಆರೋಪ, ನಟಿ ದೂರಿಗೆ ಪಕ್ಷ ಶಾಕ್‌

ಬರ್ತ್ ಡೇಗೆ ಪುರುಸೊತ್ತಿಲ್ಲ ಎಂದ ಡಾಲಿ ಧನಂಜಯ್: ಬಡವರ ಮಕ್ಕಳು ಈಗ ಕೈಗೇ ಸಿಗಲ್ಲ ಎಂದ ಫ್ಯಾನ್ಸ್

ಸಂಜನಾ ಬುರ್ಲಿ ಹೊಸ ಧಾರವಾಹಿಗೆ ನಾಯಕಿ, ವೀಕ್ಷಕರು ಇವರು ಬೇಡ ಅಂತಿರೋದ್ಯಾಕೆ

ಗುಜರಾತ್‌ನಿಂದ ಎಮ್ಮೆ ಖರೀದಿಸಲು ಹೋಗಿ ಟೋಪಿ ಹಾಕಿಕೊಂಡ ನಿರ್ದೇಶಕ ಜೋಗಿ ಪ್ರೇಮ್

ಮುಂದಿನ ಸುದ್ದಿ
Show comments