ರಜನಿ ಜತೆ ಕೈ ಜೋಡಿಸುವುದಕ್ಕೆ ನಾನು ರೆಡಿ ಎಂದ ಕಮಲ್ ಹಾಸನ್

Webdunia
ಶನಿವಾರ, 16 ಸೆಪ್ಟಂಬರ್ 2017 (10:11 IST)
ಚೆನ್ನೈ: ತಮಿಳುನಾಡಿನಲ್ಲಿ ಹೊಸ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯದಲ್ಲಿ ಹೊಸ ಶಕೆ ಆರಂಭಿಸಲು ಹೊರಟಿರುವ ನಟ ಕಮಲ್ ಹಾಸನ್ ರಜನೀಕಾಂತ್ ರಾಜಕೀಯಕ್ಕೆ ಬಂದರೆ ಅವರ ಜತೆ ಕೈ ಜೋಡಿಸಲು ಸಿದ್ಧ ಎಂದಿದ್ದಾರೆ.

 
‘ಜನರೇ ನನಗೆ ರಾಜಕೀಯಕ್ಕೆ ಬರಲು ಸ್ಟ್ರಾಂಗ್ ಸಿಗ್ನಲ್ ಕೊಡಬೇಕು. ಹಾಗಿದ್ದರೆ ಖಂಡಿತಾ ಬರುತ್ತೇನೆ. ಒಂದು ವೇಳೆ ರಜನೀಕಾಂತ್ ಕೂಡಾ ರಾಜಕೀಯಕ್ಕೆ ಬಂದರೆ ಅವರ ಜತೆ ಕೈಜೋಡಿಸುತ್ತೇನೆ. ಸಿನಿಮಾ ರಂಗದಲ್ಲಿ ನಾವಿಬ್ಬರೂ ವಿರೋಧಿಗಳಿರಬಹುದು. ಆದರೆ ಕೆಲವು ವಿಷಯಕ್ಕೆ ಬಂದರೆ ನಾವಿಬ್ಬರೂ ಪರಸ್ಪರ ಚರ್ಚಿಸುತ್ತೇವೆ. ಸಲಹೆ ಪಡೆದುಕೊಳ್ಳುತ್ತೇವೆ. ಅವರ ಜತೆ ರಾಜಕೀಯದಲ್ಲಿ ಕೈ ಜೋಡಿಸುವುದಕ್ಕೆ ನನಗೆ ಸಮಸ್ಯೆಯಿಲ್ಲ’ ಎಂದಿದ್ದಾರೆ.

ರಜನೀಕಾಂತ್ ಕೂಡಾ ಈ ಮೊದಲು ರಾಜಕೀಯಕ್ಕೆ ಬರುವುದಾಗಿ ಸುಳಿವು ನೀಡಿದ್ದರು. ಸೆಪ್ಟೆಂಬರ್ ನಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಇತ್ತ ಕಮಲ್ ಕೂಡಾ ತಮ್ಮದೇ ಪಕ್ಷ ಸ್ಥಾಪಿಸುವ ಮಾತನಾಡುತ್ತಿದ್ದಾರೆ. ಹೀಗಾಗಿ ಈ ಇಬ್ಬರೂ ಸೂಪರ್ ಸ್ಟಾರ್ ಗಳು ಒಂದಾದರೆ ತಮಿಳುನಾಡು ರಾಜಕೀಯದಲ್ಲಿ ತಲ್ಲಣವಾಗುವುದಂತೂ ಖಚಿತ.

ಇದನ್ನೂ ಓದಿ.. ಬಾಹುಬಲಿ ಚಿತ್ರಕ್ಕಾದ ಗತಿಯೇ ಧ್ರವ ಸರ್ಜಾ ಭರ್ಜರಿಗೂ ಆಯಿತು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

2013ರಿಂದ 2023ರ ನಡುವೆ ದಲಿತರ ಮೇಲಿನ ಅಪರಾಧ ಹೆಚ್ಚಳ: ಮಲ್ಲಿಕಾರ್ಜುನ ಖರ್ಗೆ

ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಖ್ಯಾತ ಬಾಡಿ ಬಿಲ್ಡರ್ ವರೀಂದರ್ ಘುಮಾನ್ ಇನ್ನಿಲ್ಲ

ಒಂದೇ ವಾರಕ್ಕೆ ₹ 510 ಕೋಟಿ ಚಾಚಿಕೊಂಡ ಕಾಂತಾರ ಪ್ರೀಕ್ವೆಲ್‌: ಹಲವು ದಾಖಲೆಗಳು ಉಡೀಸ್‌

ಸರ್ಕಾರ ಬಿಟ್ಟರೂ ನಾವು ಬಿಡಲ್ಲ: ಬಿಗ್ ಬಾಸ್ ಮನೆ ಗೇಟ್ ಏರಿ ಕನ್ನಡ ಪರ ಹೋರಾಟಗಾರರ ಹೋರಾಟ

ರಿಷಬ್ ಶೆಟ್ಟಿ ಹೈದರಾಬಾದ್ ನಲ್ಲಿ ಕನ್ನಡ ಮಾತನಾಡಿದ್ದು ಇದೇ ಕಾರಣಕ್ಕೆ

ಮುಂದಿನ ಸುದ್ದಿ
Show comments