ದಕ್ಷಿಣದಲ್ಲಿ ತಮ್ಮದೇ ಆದಂತ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಬೆಡಗಿ ಕಾಜಲ್ ಅಗರವಾಲ್. ಇದೀಗ ಟಾಲಿವುಡ್‌ನ ಪ್ರತಿಷ್ಠಿತ ಖೈದಿ ನಂಬರ್ 150 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ 150ನೇ ಚಿತ್ರವಾಗಿರುವ ಕಾರಣ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಒಂದು ಕಾಲದಲ್ಲಿ ಸ್ಟಾರ್ ಹೀರೋಗಳ ಜೊತೆ ಅಭಿನಯಿಸಿದ ಕಾಜಲ್, ಆಮೇಲೆ ಅವಕಾಶಗಳಿಗಾಗಿ ಎದುರು ನೋಡುವಂತಾಗಿತ್ತು. ಈಗ ಅದೃಷ್ಟದ ಬಾಗಿಲು ತೆಗೆದಿದ್ದು ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಆದರೆ ಸಕ್ಸರ್ ರೇಟ್ ಮಾತ್ರ ದಯನೀಯವಾಗಿದೆ.
ಸಾಮಾನ್ಯವಾಗಿ ಎಲ್ಲಾ ಹೀರೋಯಿನ್‌ಗಳು ಮಾಡುವ ಕೆಲಸವನ್ನೇ ಕಾಜಲ್ ಸಹ ಮಾಡಿದರು. ಹಾಟ್ ಫೋಟೋಶೂಟ್ ಮಾಡಿಸಿ ಫೋಟೋಗಳನ್ನು ಹರಿಯಬಿಟ್ಟರು. ಇತ್ತೀಚೆಗೆ ಬ್ಲ್ಯಾಕ್ ಅಂಡ್ ವೈಟ್ ಥೀಮ್‍ನೊಂದಿಗೆ ಶೂಟ್ ಮಾಡಿಸಿ ಆ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕಿದರು.
ಬ್ಲ್ಯಾಕ್ ಅಂಡ್ ವೈಟ್ ಚಂದಮಾನ ನೋಡಿದ ರಸಿಕರು ಕಣ್ಣುತಂಪು ಮಾಡಿಕೊಂಡರು. ಫೋಟೋ ಜೊತೆ ಫೋಟೋ ಜರ್ನಲಿಸ್ಟ್ ಟೆಡ್ ಗ್ರಾಂಟ್ ಮಾಡಿದ ಕಾಮೆಂಟನ್ನು ಅದರ ಜೊತೆಗೆ ಹಾಕಿದರು. ’ನೀನು ಯಾವತ್ತಾದರೂ ಒಬ್ಬ ವ್ಯಕ್ತಿಯ ಕಲರ್ ಫೋಟ್ ತೆಗೆದರೆ, ಅದರಲ್ಲಿ ಅವರ ಬಟ್ಟೆ ಮಾತ್ರ ಕಾಣಿಸುತ್ತದೆ. ಅದೇ ಬ್ಲ್ಯಾಕ್ ಅಂಡ್ ವೈಟ್ ಆದರೆ ಆ ಫೋಟೋದಲ್ಲಿ ಅವರ ಆತ್ಮ ಕಾಣುತ್ತದೆ’ ಎಂಬ ಕಾಮೆಂಟ್ ಸಹ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.