ಕಿರುತೆರೆಯ ಜನಪ್ರಿಯ ಗೇಮ್ ಶೋ ’ಕೌನ್ ಬನೇಗಾ ಕರೋಡ್‌ಪತಿ’. ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಿರೂಪಣೆಯ ಶೈಲಿ ಅತ್ಯಂತ ಜನಾಧರಣೆಗೆ ಪಾತ್ರವಾಗಿದೆ. ಇದೀಗ ಹೊಸ ಸೀಸನ್‍ಗೆ ರೆಡಿಯಾಗಿದೆ. ಹೌದು ಈ ವಿಷಯವನ್ನು ಸ್ವತಃ ಬಿಗ್ ಬಿ ಅಮಿತಾಬ್ ಸಾಮಾಜಿಕ ತಾಣದಲ್ಲಿ ಲೈವ್ ಚಾಟ್‌ನಲ್ಲಿ ಕನ್ಫರ್ಮ್ ಮಾಡಿದ್ದಾರೆ.
ಕಿರುತೆರೆ ಅಭಿಮಾನಿಗಳನ್ನು ರಂಜಿಸಿದ ಮ್ಯಾಜಿಕ್ ಇಂಡಿಯನ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತೊಮ್ಮೆ ವೀಕ್ಷಕರನ್ನು ರಂಜಿಸಲು ರೆಡಿಯಾಗುತ್ತಿದ್ದಾರೆ. ಮುಂದಿನ ವರ್ಷದೊಳಗೆ ಕೌನ್ ಬನೇಗಾ ಕರೋಡ್‌ಪತಿ ಗೇಮ್ ಶೋನ ಹೊಸ ಸೀಸನನ್ನು ಮತ್ತೆ ಪ್ರಾರಂಭಿಸುತ್ತಿರುವುದಾಗಿ ಫೇಸ್‌ಬುಕ್ ಲೈವ್ ಚಾಟ್‌ನಲ್ಲಿ ನಿರ್ದಿಷ್ಟಪಡಿಸಿದ್ದಾರೆ.
2017ರಲ್ಲಿ ಕೆಬಿಸಿ ಗೇಮ್ ಶೋ ಫ್ರೆಶ್ ಆಗಿ ಪ್ರಾರಂಭವಾಗಬಹುದು ಎಂದು ಬಿಗ್ ಬಿ ಹೇಳಿದ್ದಾರೆ. ಅಂದಹಾಗೆ 2006ರಲ್ಲಿ ಶುರುವಾದ ಈ ಕ್ವಿಜ್ ಕಾರ್ಯಕ್ರಮ ಅಪಾರ ಜನಮನ್ನಣೆಗೆ ಪಾತ್ರವಾಯಿತು. ಹಲವು ಸೀಸನ್‌ಗಳ ಗ್ಯಾಪ್ ಬಳಿಕ ಮಮ್ತ್ತೆ 2014ರಲ್ಲಿ ಪ್ರಾರಂಭವಾಯಿತು. ಸೆಕೆಂಡ್ ಸೀಸನ್‍ನಲ್ಲೂ ಅಷ್ಟೇ ಜನಪ್ರಿಯವಾಯಿತು. ’ಲಾಕ್ ಕರ್ ದೂಂ’ ಅನ್ನೋ ಧ್ವನಿಗೆ ಮತ್ತೊಮ್ಮೆ ಅಭಿಮಾನಿಗಳು ಹಾತೊರೆಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.