Publish Date: Sat, 25 Feb 2017 (21:28 IST)
Updated Date: Sat, 25 Feb 2017 (21:30 IST)
ಆಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಹಾಗೂ ಹುಮಾ ಖುರೇಶಿ ಅಭಿನಯದ ಜಾಲಿ ಎಲ್ಎಲ್‌ಬಿ 2 ಚಿತ್ರಕ್ಕೆ ಬಾಕ್ಸ್ ಆಫೀಸಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ ಫೆ.24ಕ್ಕೆ ಚಿತ್ರ ಒಟ್ಟು 106.20 ಕೋಟಿ ಗಳಿಕೆ ಮಾಡಿದೆ. ಈ ಮೂಲಕ 100 ಕೋಟಿ ಕ್ಲಬ್ ಸೇರಿದೆ ಜಾಲಿ ಎಲ್ಎಲ್‌ಬಿ.
ಸಾಕಷ್ಟು ನಿರೀಕ್ಷೆ ಹಾಗು ಭರವಸೆಗಳನ್ನು ಮೂಡಿಸಿದ್ದ ಕಂಗನಾ ರನೌತ್ ಅಭಿನಯದ ’ರಂಗೂನ್’ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ಇದುವರೆ ಕೇವಲ ರೂ.10 ಕೋಟಿ ಗಳಿಕೆಯನ್ನೂ ದಾಟಿಲ್ಲ. ಮೂಲಕ ಫ್ಲಾಪ್ ಚಿತ್ರಗಳ ಪಟ್ಟಿಗೆ ಸೇರಿದೆ.
ಜಾಲಿ ಎಲ್ಎಲ್‌ಬಿ ಚಿತ್ರ ಮೊದಲ ದಿನವೇ ರೂ.13 ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ ರಂಗೂನ್ ಮೊದಲ ದಿನ ಕೇವಲ ರೂ.6 ಕೋಟಿ ಕಲೆಕ್ಷನ್ ಮಾಡಿದೆ. ಅಕ್ಕಿ ಚಿತ್ರ ಯಶಸ್ವಿ 12 ದಿನಗಳ ಪ್ರದರ್ಶನದತ್ತ ಮುನ್ನಡೆದಿದ್ದು ಮತ್ತೊಂದು ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.