Select Your Language

Notifications

webdunia
webdunia
webdunia
webdunia

ಪ್ರೇಕ್ಷಕರೇ ನನ್ನ ಪಾಲಿನ ಗಾಡ್‌ಫಾದರ್ : ತಾಪಸಿ

ಪ್ರೇಕ್ಷಕರೇ ನನ್ನ ಪಾಲಿನ ಗಾಡ್‌ಫಾದರ್ : ತಾಪಸಿ
Mumbai , ಶನಿವಾರ, 25 ಫೆಬ್ರವರಿ 2017 (07:11 IST)
ತಾಪಸಿ ಸದ್ಯಕ್ಕೆ ಬಾಲಿವುಡ್‍ನಲ್ಲಿ ಬಿಜಿಯಾಗಿದ್ದಾರೆ. ದಕ್ಷಿಣದಲ್ಲಿ ಹೇಳಿಕೊಳ್ಳುವಂತಹ ಚಿತ್ರಗಳಲ್ಲಿ ಅಭಿನಯಿಸಲಿಲ್ಲ. ಅಮಿತಾಬ್ ಜತೆಗಿನ ’ಪಿಂಕ್’ ಚಿತ್ರದ ಬಳಿಕ ಸಂಪೂರ್ಣ ಗಮನವನ್ನು ಬಿಟೌನ್ ಕಡೆಗೆ ನೆಟ್ಟಿದ್ದಾರೆ. ಈ ಮೂಲಕ ಮಹಿಳಾ ಪ್ರಧಾನ ಚಿತ್ರಗಳ ಮೂಲಕ ತಾಪಸಿ ಬ್ರಾಂಡ್ ಅಂಬಾಸಿಡರ್ ಆಗಿ ಬದಲಾಗಿದ್ದಾರೆ. 
 
ಇತ್ತೀಚೆಗೆ ತೆರೆಕಂಡ ಘಾಜಿ ಚಿತ್ರದ ಮೂಲಕ ಮತ್ತೊಮ್ಮೆ ಎಲ್ಲರ ಗಮನಸೆಳೆದರು. ಬಣ್ಣದ ಜಗತ್ತಿನ ಯಾವುದೇ ನಂಟಿಲ್ಲದೆ ಚಿತ್ರರಂಗದಲ್ಲಿ ನೆಲೆಕಂಡುಕೊಂಡಿರುವ ಬಗ್ಗೆ ತಾಪಸಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಸಿನಿಮಾ ಹಿನ್ನೆಲೆ ಇಲ್ಲದೆ ನಾನು ಚಿತ್ರರಂಗಕ್ಕೆ ಬಂದೆ. ದೊಡ್ಡ ಸ್ಟಾರ್ ನಟನೊಂದಿಗೆ ಅಭಿನಯಿಸಲಿಲ್ಲ. ಯಾವುದೇ ನಿರ್ಮಾಣ ಸಂಸ್ಥೆಗಳೊಂದಿಗೆ ನಾನು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ.."
 
"ಹಾಗಾಗಿ ಸಿನಿಮಾ ಕ್ಷೇತ್ರದಲ್ಲಿ ನೆಲೆಕಂಡುಕೊಳ್ಳಲು ತುಂಬಾ ಕಷ್ಟಕರವಾಯಿತು. ಪ್ರತಿ ಸಿನಿಮಾದಲ್ಲೂ ಪ್ರತಿಭೆ ಪ್ರದರ್ಶಿಸಬೇಕು. ಒಂದೇ ಒಂದು ತಪ್ಪು ಮಾಡಿದರೂ ಉದ್ಯಮಕ್ಕೆ ದೂರವಾದಂತೆ. ಎಲ್ಲಾ ವಿಷಯಗಳಲ್ಲೂ ದೃಢವಾಗಿರಬೇಕು. ನನ್ನೊಂದಿಗೆ ಕೆಲಸ ಮಾಡಿದವರೆಲ್ಲಾ ನನ್ನ ಅಭಿನಯ ನೋಡಿ ನನ್ನ ಮೇಲೆ ನಂಬಿಕೆ ಬೆಳೆಸಿಕೊಂಡರು. ಇಲ್ಲಿ ನನಗೆ ಯಾರೂ ಗಾಡ್‌ಫಾದರ್‌ಗಳಿಲ್ಲ. ಪ್ರೇಕ್ಷಕರೇ ನನ್ನ ಪಾಲಿನ ಗಾಡ್‍ಫಾದರ್‌ಗಳು" ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ಯೂಬ್‌ಲೈಟ್ ಹೊತ್ತಿದ ಬಳಿಕ ಅಮಿತಾಬ್ ಜತೆಗೆ..