Select Your Language

Notifications

webdunia
webdunia
webdunia
webdunia

ಟ್ಯೂಬ್‌ಲೈಟ್ ಹೊತ್ತಿದ ಬಳಿಕ ಅಮಿತಾಬ್ ಜತೆಗೆ..

ಟ್ಯೂಬ್‌ಲೈಟ್ ಹೊತ್ತಿದ ಬಳಿಕ ಅಮಿತಾಬ್ ಜತೆಗೆ..
Mumbai , ಶನಿವಾರ, 25 ಫೆಬ್ರವರಿ 2017 (07:06 IST)
ಸಲ್ಮಾನ್ ಖಾನ್ ಜತೆಗಿನ ಭಜರಂಗಿ ಭಾಯ್ ಜಾನ್ ಚಿತ್ರದ ಮೂಲಕ ನಿರ್ದೇಶಕ ಕಬೀರ್ ಖಾನ್ ಅದೃಷ್ಟ ಬದಲಾಯಿತು. ಈಗ ಮತ್ತೆ ಸಲ್ಮಾನ್ ಜತೆಗೆ ಟ್ಯೂಬ್‌ಲೈಟ್ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಯಶಸ್ವಿ ಜೋಡಿಯಾದ ಕಾರಣ ಈ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆಗಳಿವೆ. 
 
ಈ ಚಿತ್ರದಲ್ಲಿ ಸಲ್ಮಾನ್ ಬುದ್ಧಿಮಾಂದ್ಯ ಯುವಕನಾಗಿ ಕಾಣಿಸಲಿದ್ದಾರೆ. ಸಲ್ಮಾನ್ ಖಾನ್‌ಗೆ ಈ ಸಲ ಚೀನಾ ತಾರೆ ಜುಜು ಜೋಡಿಯಾಗುತ್ತಿದ್ದಾರೆ. ಭರದಿಂದ ಸಾಗುತ್ತಿರುವ ಈ ಚಿತ್ರ ಜೂನ್‌ನಲ್ಲಿ ತೆರೆಗೆ ಬರಲಿದೆ. ಆದರೆ ಅದಾಗಲೆ ಕಬೀರ್ ಇನ್ನೊಂದು ಚಿತ್ರವನ್ನೂ ಕೈಗೆತ್ತಿಕೊಂಡಿದ್ದಾರೆ.
 
ಟ್ಯೂಬ್‌ಲೈಟ್ ಬಳಿಕ ಅಮಿತಾಬ್ ಬಚ್ಚನ್ ಜತೆಗೆ ಸಿನಿಮಾ ಮಾಡಲಿದ್ದಾರೆ. ಇದುವರೆಗೂ ಬಿಗ್ ಬಿ ಕಾಣಿಸದ ಭಿನ್ನವಾದ ಗೆಟಪ್‌ನಲ್ಲಿ  ತೆರೆಗೆ ತರಲಿದ್ದಾರಂತೆ. ಟ್ಯೂಬ್‌ಲೈಟ್ ಬಳಿಕ ಅಮಿತಾಬ್ ಜತೆಗಿನ ಚಿತ್ರ ಸೆಟ್ಟೇರಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳಿಗೆ ಥ್ರಿಲ್ ಕೊಟ್ಟ ಮುನ್ನಾಬಾಯ್