Select Your Language

Notifications

webdunia
webdunia
webdunia
webdunia

ರಜನಿಕಾಂತ್ ಜೊತೆ ಅಭಿನಯಿಸಲು ಜಯಾ ಒಲ್ಲೆ ಅಂದಿದ್ರು

ರಜನಿಕಾಂತ್ ಜೊತೆ ಅಭಿನಯಿಸಲು ಜಯಾ ಒಲ್ಲೆ ಅಂದಿದ್ರು
Chennai , ಬುಧವಾರ, 7 ಡಿಸೆಂಬರ್ 2016 (09:44 IST)
ದಕ್ಷಿಣ ಭಾರತದಲ್ಲಿ ಎನ್‌ಟಿಆರ್, ಎಎನ್‍ಆರ್, ಎಂಜಿಆರ್, ಶಿವಾಜಿ ಗಣೇಶನ್ ಮುಂತಾದ ಘಟಾನುಘಟಿ ಸ್ಟಾರ್ ಹೀರೋಗಳ ಜೊತೆ ಜಯಲಲಿತಾ ಅಭಿನಯಿಸಿದ್ದಾರೆ. ಅರುವತ್ತರ ದಶಕದಲ್ಲಿ ಬಣ್ಣದ ವೃತ್ತಿ ಆರಂಭಿಸಿದ ಜಯಲಲಿತಾ 70ರ ದಶಕದ ವೇಳೆಗೆ ಸ್ಟಾರ್ ಹೀರೋಯಿನ್ ಆಗಿ ಹೊರಹೊಮ್ಮಿದ್ದರು. ಆಮೇಲೆ 1980ರಲ್ಲಿ ಸಿನಿಮಾಗಳಿಗೆ ಗುಡ್ ಬೈ ಹೇಳಿದ್ದರು.
 
ಎಂಜಿಆರ್ ಅವರ ಆಹ್ವಾನದ ಮೇರೆಗೆ ಎಡಿಎಂಕೆ ಪಕ್ಷಕ್ಕೆ ಸೇರಿ ಪ್ರಚಾರ ಮಾಡುತ್ತಿದ್ದ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಅಭಿನಯಿಸುವ ಅವಕಾಶ ಬಂದಿತ್ತು. ರಜನಿಕಾಂತ್ ಹೀರೋ ಆಗಿದ್ದ ’ಬಿಲ್ಲಾ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವಂತೆ ಜಯಲಲಿತಾರನ್ನು ಕೇಳಿದ್ದರಂತೆ. 
 
ತಾನು ರಾಜಕೀಯದಲ್ಲಿ ಬ್ಯುಸಿಯಾಗಿರುವುದರಿಂದ ಸಾಧ್ಯವಿಲ್ಲ. ಈಗ ನನ್ನ ಗುರಿ ರಾಜಕೀಯ ಕ್ಷೇತ್ರ ಎಂದು ಹೇಳಿ ರಜನಿಕಾಂತ್ ಜೊತೆಗಿನ ಆಫರ್ ಒಲ್ಲೆ ಎಂದಿದ್ದರಂತೆ. ಆಮೇಲೆ ಅದೇ ಪಾತ್ರ ಮತ್ತೊಬ್ಬ ಹೀರೋಯಿನ್ ಶ್ರೀಪ್ರಿಯಾ ಅವರಿಗೆ ದಕ್ಕಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐವತ್ತು ವರ್ಷಗಳ ಬಳಿಕ ಟಾಲಿವುಡ್‌ನಲ್ಲಿ ರೇಖಾ