ಎವರ್‌ಗ್ರೀನ್ ನಟಿ ರೇಖಾ ಸುಮಾರು 50 ವರ್ಷಗಳ ಬಳಿಕ ಟಾಲಿವುಡ್‍ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಬಾಲನಟಿಯಾಗಿ ದಕ್ಷಿಣ ಚಿತ್ರರಂಗಕ್ಕೆ ಪರಿಚಯವಾದವರು ರೇಖಾ. 1966ರಲ್ಲಿ ’ರಂಗುಲ ರಾಟ್ನಂ’ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು.
ಆಮೇಲೆ ಬಾಲಿವುಡ್‍ಗೆ ಹೊರಟ ರೇಖಾ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಈಗ ತೆಲುಗಿನಲ್ಲಿ ಬರುತ್ತಿರುವ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ರೇಖಾ ನಟಿಸಲಿದ್ದಾರಂತೆ. ಈ ಸಿನಿಮಾದಲ್ಲಿ ಮೂರು ತಲೆಮಾರುಗಳನ್ನು ತೋರಿಸಲಿದ್ದಾರೆ.
ಒಂದು ತಲೆಮಾರನ್ನು ಕಪ್ಪು ಬಿಳುಪಿನಲ್ಲಿ ತೋರಿಸಲಿದ್ದೇವೆ. ಈ ಚಿತ್ರದಲ್ಲಿ ರೇಖಾ ಅವರರು ತಾಯಿ ಪಾತ್ರ ಎನ್ನುತ್ತವೆ ಮೂಲಗಳು. ಜನವರಿಯಲ್ಲಿ ಸೆಟ್ಟೇರಲಿರುವ ಈ ಚಿತ್ರಕ್ಕೆ ಹೊಸಬ ಸೂರ್ಯ ಆಕ್ಷನ್ ಕಟ್ ಹೇಳಲಿದ್ದಾರೆ. ಕಳೆದ ವರ್ಷ ಬಾಲಿವುಡ್‌ನ ಷಮಿತಾಬ್ ಚಿತ್ರದಲ್ಲಿ ರೇಖಾ ಅಭಿನಯಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.