ಬೇರೆ ರಾಜ್ಯಗಳ ರಾಜಕೀಯದ ಜೊತೆಗೆ ಹೋಲಿಸಿ ನೋಡಿದರೆ ತಮಿಳುನಾಡು ಪಾಲಿಟಿಕ್ಸ್ ಸ್ವಲ್ಪ ಭಿನ್ನ. ಬೇರೆ ರಾಜ್ಯಗಳಲ್ಲಿ ಅಧಿಕಾರ, ಪ್ರತಿಪಕ್ಷಗಳ ನೇತಾರರು ಅಗತ್ಯ ಬಿದ್ದಾಗ ಒಂದಾಗುತ್ತಿರುತ್ತಾರೆ. ಆದರೆ ತಮಿಳುನಾಡಲ್ಲಿ ಮಾತ್ರ ಆ ರೀತಿ ಇಲ್ಲ.
ಒಂದು ಪಕ್ಷ ಅಧಿಕಾರಕ್ಕೆ ಬಂದರೆ ಇನ್ನೊಂದು ಪಾರ್ಟಿಗೆ ನಿದ್ದೆ ಇಲ್ಲದಂತೆ ಮಾಡುತ್ತೆ. ಕರುಣಾನಿಧಿ, ಜಯಲಲಿತಾ ಹೀಗೆ ಒಬ್ಬರು ಅಧಿಕಾರದಲ್ಲಿದ್ದಾಗ ಇನ್ನೊಬ್ಬರನ್ನು ಜೈಲು ಪಾಲಾಗಿದ್ದರು. ಇವರಿಬ್ಬರೂ ಹಾವು ಮುಂಗುಸಿ ತರಹ ಇದ್ದರು. ಆ ರೀತಿ ಇದ್ದವರು ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ್ದರಂತೆ.
ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ರಾಜಕೀಯಕ್ಕೆ ಬರುವುದಕ್ಕೂ ಮುನ್ನ ತಮಿಳು ಸಿನಿಮಾ ಉದ್ಯಮದಲ್ಲಿ ಹೆಸರಾಂತ ಬರಹಗಾರ. ಅವರ ಕೈಯಲ್ಲಿ ಬರೆಸಿಕೊಳ್ಳಬೇಕು ಎಂದು ನಿರ್ದೇಶಕರು, ನಿರ್ಮಾಪಕರು ಕಾಯಬೇಕಾಗಿತ್ತು.
ಜಯಲಲಿತಾ ಸಿನಿಮಾಗಳಲ್ಲಿ ಅಡಿಯಿಡುವ ಸಮಕ್ಕೆ ಸಿನಿಮಾ ಕೆಲಸಗಳನ್ನು ಕಡಿಮೆ ಮಾಡಿಕೊಂಡು ಡಿಎಂಕೆ ಪಕ್ಷದ ವ್ಯವಹಾರಗಳಲ್ಲಿ ಮುಳುಗಿಹೋಗಿದ್ದರು ಕರುಣಾನಿಧಿ. ಆದರೆ 1966ರಲ್ಲಿ ಬಂದ ಮಣಿಮುಕುಟಂ ಸಿನಿಮಾ ಇವರಿಬ್ಬರನ್ನೂ ಒಂದೇ ಕಡೆಗೆ ಸೇರಿಸಿತು. ಆ ಸಿನಿಮಾಗೆ ಕರುಣಾನಿಧಿ ಸಾಹಿತಿ. ಜಯಲಲಿತಾ ಸೆಕೆಂಡ್ ಹೀರೋಯಿನ್. ಹಾಗೆ ಕರುಣಾ ಬರೆದ ಒಂದು ಪಾತ್ರವನ್ನು ಪೋಷಿಸಿದ್ದರು ಜಯಲಲಿತಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.