ಬೆಂಗಳೂರು: ನವರಸನಾಯಕ ಜಗ್ಗೇಶ್ ಪತ್ನಿ ಪರಿಮಳಾ ಅವರ ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯೇ? ಹಾಗಂತ ಹೇಳುತ್ತಿದೆ ಜಗ್ಗೇಶ್ ಟ್ವೀಟ್.
ಆಧುನಿಕ ತಂತ್ರಜ್ಞಾನ ಬಳಸಿ ನನ್ನ ಪತ್ನಿಯ ಅಕೌಂಟಿನಿಂದ ಯಾರೋ ಒಂದು ಲಕ್ಷ ರೂಪಾಯಿ ಮೊತ್ತದ ಶಾಪಿಂಗ್ ಮಾಡಿದ್ದಾರೆ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ. ಇದು ಯಾರೋ ಖದೀಮರ ಕೆಲಸ. ಕೂಡಲೇ ಬ್ಯಾಂಕ್ ಅಕೌಂಟ್ ಬ್ಲಾಕ್ ಮಾಡಿಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.
ಈಗೀಗ ಅಕೌಂಟ್ ಗೆ ಕನ್ನ ಹಾಕುವವರ ಸಂಖ್ಯೆ ಜಾಸ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಜಗ್ಗೇಶ್ ಅಭಿಮಾನಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಅಲ್ಲದೆ ಯಾರೂ ಈ ರೀತಿ ಮೋಸ ಹೋಗಬೇಡಿ. ಇಂತಹ ಪ್ರಕರಣ ಗಮನಕ್ಕೆ ಬಂದ ತಕ್ಷಣ ಬ್ಯಾಂಕ್ ನ ಗ್ರಾಹಕ ಕೇಂದ್ರಕ್ಕೆ ಫೋನ್ ಮಾಡಿ ಅಕೌಂಟ್ ಬ್ಲಾಕ್ ಮಾಡಿಸಿ ಎಂದೂ ಸಲಹೆ ನೀಡಿದ್ದಾರೆ.
ಈ ರೀತಿ ಎಷ್ಟೋ ಮಂದಿ ಅಕೌಂಟ್ ಗೆ ಹ್ಯಾಕರ್ ಗಳು ಕನ್ನ ಹಾಕಿ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿದೆ. ಹಾಗಾಗಿ ನಿಮ್ಮ ಅಕೌಂಟ್ ನ ಮಾಹಿತಿಯನ್ನು ಅನಗತ್ಯವಾಗಿ ಯಾರಿಗೂ ಕೊಡದಿರುವುದೇ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ