Select Your Language

Notifications

webdunia
webdunia
webdunia
webdunia

ವಿಶಿಷ್ಟವಾಗಿ ತೋತಾಪುರಿ ಪ್ರಮೋಷನ್ ಮಾಡಿದ ಜಗ್ಗೇಶ್-ವಿಜಯ್ ಪ್ರಸಾದ್

ವಿಶಿಷ್ಟವಾಗಿ ತೋತಾಪುರಿ ಪ್ರಮೋಷನ್ ಮಾಡಿದ ಜಗ್ಗೇಶ್-ವಿಜಯ್ ಪ್ರಸಾದ್
ಬೆಂಗಳೂರು , ಶುಕ್ರವಾರ, 27 ಆಗಸ್ಟ್ 2021 (09:59 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ.


ಇದೀಗ ಚಿತ್ರತಂಡ ಪ್ರಮೋಷನ್ ಕೆಲಸಗಳನ್ನು ಆರಂಭಿಸಿದೆ. ಜಗ್ಗೇಶ್ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ವಿಶಿಷ್ಟವಾಗಿ ಚಿತ್ರದ ಪ್ರಮೋಷನ್ ಶುರು ಮಾಡಿದ್ದಾರೆ.

ಇಬ್ಬರೂ ಜೊತೆಯಾಗಿ ಕೂತು ತೋತಾಪುರಿ ಮಾವಿನ ಕಾಯಿ ಸವಿಯುವ ದೃಶ್ಯದ ಜೊತೆಗೆ ತಮಾಷೆಯಾಗಿ ಮಾತನಾಡುತ್ತಾ ಸಿನಿಮಾ ಟೀಸರ್ ಸದ್ಯದಲ್ಲೇ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ. ಅಂದ ಹಾಗೆ ಈ ಸಿನಿಮಾ ನೀರ್ ದೋಸೆ ಬಳಿಕ ಈ ಇಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾವಾಗಿದೆ. ಇನ್ನೊಂದು ವಿಶೇಷವೆಂದರೆ ಇದು ಎರಡು ಭಾಗಗಳಾಗಿ ಬರಲಿದೆ. ಜಗ್ಗೇಶ್ ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಮಂಜು ಪುತ್ರನಿಗೆ ಲಾಂಗ್ ಹಿಡಿಯುವ ಪಾಠ ಮಾಡಿದ ಶಿವರಾಜ್ ಕುಮಾರ್