Webdunia - Bharat's app for daily news and videos

Install App

ನಿರ್ದೇಶಕ ಗುರುಪ್ರಸಾದ್ ಪುರಾಣವೆಲ್ಲಾ ಇಂಚಿಂಚೂ ಬಿಚ್ಚಿಟ್ಟ ನಟ ಜಗ್ಗೇಶ್

Sampriya
ಭಾನುವಾರ, 3 ನವೆಂಬರ್ 2024 (12:45 IST)
Photo Courtesy X
ಬೆಂಗಳೂರು: ಆತ್ಮಹತ್ಯೆಗೆ ಶರಣಾದ ಗುರುಪ್ರಸಾದ್‌ ನಡವಳಿಕೆಯಿಂದ ಅನೇಕರಿಗೆ ನೋವಾಗಿದೆ. ಆತನ ಅಹಂಕಾರದಿಂದ ಎಲ್ಲರೂ ದೂರವಾಗುತ್ತಾ ಹೋದರು. ಹಲವು ಬಾರಿ ಆತನನ್ನು ಸರಿಮಾಡಲು ಪ್ರಯತ್ನಿಸಿದೆ ಆದರೆ ಸಾಧ್ಯವಾಗಲಿಲ್ಲ. ವಿಪರೀತ ಕುಡಿತದ ಚಟವೇ ಈ ಸ್ಥಿತಿಗೆ ಕಾರಣ ಎಂದು ನಟ ಜಗ್ಗೇಶ್ ಹೇಳಿದರು.

ಗುರುಪ್ರಸಾದ್ ಜತೆಗಿನ ಬಾಂಧ್ಯವದ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್ ಅವರು, ನಮ್ಮಿಬ್ಬರ ಭೇಟಿಯ ಶುರುವಿನ ಸಂದರ್ಭದಲ್ಲಿ ಗುರುಪ್ರಸಾದ್‌ ಬ್ಯಾಗ್‌ತುಂಬಾ ಬುಕ್ ಹಾಗೂ ಪೆನ್ನು ಹಿಡಿದುಕೊಂಡು ಕಾಣಿಸಿಕೊಳ್ಳುತ್ತಿದ್ದ, ದಿನ ಕಳೆದಂತೆ ನೋಡಿದ್ದು ಬ್ಯಾಗ್‌ನಲ್ಲಿ ಮದ್ಯದ ಬಾಟಲ್ ಹಿಡಿದುಕೊಂಡಿರುವ ಗುರುಪ್ರಸಾದ್ ನನ್ನು.

 ವಿಪರೀತ ಕುಡಿತದ ಚಟಕ್ಕೆ ಒಳಗಾದ ಗುರುಪ್ರಸಾದ್, ತನ್ನ ತಾಯಿಗೂ ಮರ್ಯಾದೆಯನ್ನು ನೀಡುತ್ತಿರಲಿಲ್ಲ. ಆತನ ಪತ್ನಿ ಹಾಗೂ ನಾನು ತುಂಬಾನೇ ಸರಿ ಮಾಡಲು ಪ್ರಯತ್ನಿಸಿದೆವು. ಆದರೆ ಅಹಂಕಾರದಿಂದ ಯಾರಾ ಮಾತನ್ನು ಕೇಳುತ್ತಿರಲಿಲ್ಲ. ಇದರಿಂದ ಮೊದಲ ಪತ್ನಿಯಿಂದ ದೂರವಾಗಿ, ಎರಡನೇ ಮದುವೆ ಮಾಡಿಕೊಂಡ. ಈಗ ಸಣ್ಣ ಮಗು ಬೇರೆ ಇದೆ ಎಂದರು.

ಇನ್ನೂ ವಿಪರೀತ ಕುಡಿತದ ಚಟದಿಂದ ಹಲವು ಬಾರಿ ಕರೆ ಮಾಡಿ ನನಗೆ ಮದ್ಯದ ಬಾಟಲಿ ನೀಡುವಂತೆ ಬೇಡಿಕೆಯನ್ನು ಇಡುತ್ತಿದ್ದ.  ಕಳೆದ 10 ವರ್ಷಗಳಿಂದ ನಾನು ಆತನ ಸಂಪರ್ಕದಿಂದ ದೂರವಾದೆ ಎಂದು ಜಗ್ಗೇಶ್ ಹೇಳಿದರು. ಆತನ ಮೊದಲ ಪತ್ನಿ ದೇವತೆಯಂತವಳು. ತಾಯಿಗೆ ತುಂಬಾ ಕೆಟ್ಟ ಮಾತುಗಳಿಂದ ಬೈತಾ ಇದ್ದ. ಹೆತ್ತ ತಾಯಿಗೆ ಗೌರವ ಕೊಡ್ಬೇಕೆಂದು ಬುದ್ಧಿಮಾತು ಹೇಳ್ತಾ ಇದ್ದೆ, ಆದರೆ ಕೇಳ್ತಾನೆ ಇರ್ಲಿಲ್ಲ ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments