ಕಾಮಿಡಿ ಕಿಲಾಡಿಗಳು ನಯನಾ ಕನ್ನಡ ವಿವಾದ: ನೆರವಿಗೆ ಬಂದ ಜಗ್ಗೇಶ್

Webdunia
ಶನಿವಾರ, 11 ಜುಲೈ 2020 (09:40 IST)
ಬೆಂಗಳೂರು: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಖ್ಯಾತಿಗೆ ಬಂದ ನಯನಾ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಕಾಮೆಂಟ್ ಒಂದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ನಯನಾ ಪರವಾಗಿ ಜಗ್ಗೇಶ್ ಮಾತನಾಡಿದ್ದಾರೆ.


ನಯನಾ ತಮ್ಮ ಪೋಸ್ಟ್ ಒಂದರಲ್ಲಿ ಇಂಗ್ಲಿಷ್ ನಲ್ಲಿ ಅಡಿಬರಹ ಬರೆದಿದ್ದರು. ಇದನ್ನು ನೋಡಿ ನೆಟ್ಟಿಗರೊಬ್ಬರು ನಿಮಗೆ ಬೆಳೆಯುವವರೆಗೆ ಕನ್ನಡ ಬೇಕು. ಆಮೇಲೆ ಯಾಕೆ ಇಂಗ್ಲಿಷ್ ಬಳಸುತ್ತೀರಿ ಎಂದು ಕೇಳಿದ್ದ. ಇದಕ್ಕೆ ನಯನಾ ಖಾರವಾಗಿ ‘ಅಪ್ಪಾ.. ಕನ್ನಡದ ಭಕ್ತ ಮುಚ್ಕೊಂಡು ಹೋಗಪ್ಪಾ’ ಎಂದು ಕಾಮೆಂಟ್ ಮಾಡಿದ್ದರು.

ಕನ್ನಡದ ಬಗ್ಗೆ ಕೇಳಿದ್ದಕ್ಕೆ ಈ ಮಟ್ಟಿಗೆ ಕಾಮೆಂಟ್ ಮಾಡಬೇಕಾಗಿರಲಿಲ್ಲ ಎಂದು ಹಲವರು ಆಕ್ಷೇಪಿಸಿದ್ದರು. ಈ ವಿವಾದದ ಬಗ್ಗೆ ಮಾತನಾಡಿರುವ ಜಗ್ಗೇಶ್ ‘ಈಕೆ ಇನ್ನೂ ಸೊಸೆ, ಅನುಭವದ ಅತ್ತೆ ಆಗಲು ಸಮಯ ಬೇಕು. ನಮ್ಮ ಕಾಲದಲ್ಲಿ  ದಿನ ಹಾಗೂ ವಾರದ ಪತ್ರಿಕೆಯಲ್ಲಿ ಪ್ರತಿಕ್ರಿಯೆ ಬರುತ್ತಿತ್ತು. ಇಂದು ಅಂಗೈಯಲ್ಲೇ ಅಭಿಪ್ರಾಯ ಕುಟ್ಟುವ ಕೋಟ್ಯಂತರ ಪತ್ರಕರ್ತರಿದ್ದಾರೆ. ಹಾಗಾಗಿ ಎಚ್ಚರವಾಗಿ ಉತ್ತರಿಸಬೇಕು. ಇಲ್ಲದಿದ್ದರೆ ಗಮನಿಸದೆ ಮುಂದೆ ಹೋಗಬೇಕು. ಅನ್ಯರಿಗೆ ಉತ್ತರಿಸಿ ಕೂತರೆ ನಮ್ಮ ಗುರಿ ಶೂನ್ಯ. ಸಮಯ ವ್ಯರ್ಥ’ ಎಂದು ಪ್ರತಿಕ್ರಿಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಮುಂದಿನ ಸುದ್ದಿ
Show comments