Select Your Language

Notifications

webdunia
webdunia
webdunia
webdunia

ದರ್ಶನ್ ಹಾಗೂ ಸುದೀಪ್ ಮಧ್ಯ ಜಾತಿ ವಿಷ ಬೀಜ ಬಿತ್ತಿದವರ ಮೇಲೆ ಕಿಡಿಕಾರಿದ ನಟ ಜಗ್ಗೇಶ್

ದರ್ಶನ್ ಹಾಗೂ ಸುದೀಪ್ ಮಧ್ಯ ಜಾತಿ ವಿಷ ಬೀಜ ಬಿತ್ತಿದವರ ಮೇಲೆ ಕಿಡಿಕಾರಿದ ನಟ ಜಗ್ಗೇಶ್
ಬೆಂಗಳೂರು , ಬುಧವಾರ, 10 ಅಕ್ಟೋಬರ್ 2018 (08:30 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ದರ್ಶನ್ ಹಾಗೂ ಸುದೀಪ್ ಈಗಾಗಲೇ ಸಾಕಷ್ಟು ಅಂತರ ಏರ್ಪಟ್ಟಿದೆ. ಈ ನಡುವೆ ವೀರ ಮದಕರಿ ಚಿತ್ರದ ಕುರಿತು ತಮ್ಮ ನೆಚ್ಚಿನ ನಟರೇ ಮದಕರಿ ಪಾತ್ರ ಮಾಡಬೇಕೆಂದು ಅವರ ಅಭಿಮಾನಿಗಳ ನಡುವೆ ವಾರ್ ಶುರುವಾಗಿದೆ. ಆದರೆ ಇದೀಗ ಮಠಾಧೀಶರೊಬ್ಬರು ಮಧ್ಯಪ್ರವೇಶಿಸಿದ್ದು, ಮದಕರಿ ಚಿತ್ರದಲ್ಲಿ ನಟ ಕಿಚ್ಚ ಸುದೀಪ್‌ ಅವರೇ ನಟಿಸಬೇಕು ಎಂದು ಆಗ್ರಹಿಸಿದ್ದಾರೆ.


ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ದಾವಣಗೆರೆ ಜಿಲ್ಲೆಯ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ, ಸುದೀಪ್‌ ಬುದ್ಧಿಜೀವಿ. ಅವರು ವಾಲ್ಮೀಕಿ ಸಮುದಾಯದವರಾಗಿದ್ದಾರೆ. ಆದ್ದರಿಂದ ಮದಕರಿ ಚಿತ್ರದಲ್ಲಿ ಕಿಚ್ಚ ಸುದೀಪ್‌ ಅವರೇ ನಟಿಸಬೇಕು. ಅದನ್ನು ಹೊರತು ಪಡಿಸಿ ಈ ಪಾತ್ರದಲ್ಲಿ ಬೇರೆ ನಟರು ಅಭಿನಯಿಸಿದರೆ ಕಾನೂನು ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.


ಆದರೆ ಶ್ರೀಗುರುಗಳು  ಜಾತಿಯ ಕುರಿತು ತಾರತಮ್ಯ ಮಾಡುತ್ತಿರುವುದನ್ನು ಕೇಳಿ ಕಿಡಿಕಾರಿದ ನಟ ಜಗ್ಗೇಶ್ ಅವರು ''ಶಾರದೆಯ ಕಲಾ ದೇಗುಲ ಚಿತ್ರರಂಗ, ಜಾತಿ ರಹಿತ ಪುಣ್ಯ ಧಾಮ! ಕಲೆಗೆ ಜಾತಿಯಿಲ್ಲ! ವಿಶ್ವದಲ್ಲೇ ಜಾತಿ ಇಲ್ಲದೆ ಒಂದೇ ತಾಯಿ ಮಕ್ಕಳಂತೆ ಬದುಕುವ ಸ್ಥಳ ಶಾರದೆ ಮಡಿಲು! ಇಂಥ ಪವಿತ್ರ ಜಾಗದಲ್ಲಿ ಜಾತಿ ವಿಷ ಬೀಜ ನೆತ್ತುವರು ಅಳಿವಿನ ಅಂಚಿಗೆ ಸರಿಯುತ್ತಾರೆ. ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆಬೇಡ! ವಿನಾಶಕಾಲಕ್ಕೆ ವಿಪರೀತ ಬುದ್ಧಿ! ಎಚ್ಚರವಾಗಿರಿ ಕಲಾ ಬಂಧುಗಳೆ..!!'' ಎಂದು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಪಮ್ ಖೇರ್‌ರೊಂದಿಗೆ ನ್ಯೂಯಾರ್ಕ್ ಸುತ್ತಿದ ರಿಷಿ ಕಪೂರ್..