Publish Date: Mon, 08 Oct 2018 (08:25 IST)
Updated Date: Mon, 08 Oct 2018 (08:27 IST)
ಬೆಂಗಳೂರು : ಕಿರುತೆರೆ ನಟಿಯೊಬ್ಬಳ ಮೇಲೆ ಆಕೆಯ ಸ್ನೇಹಿತನೇ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿದ್ದಲ್ಲದೆ ಕೊಲೆ ಬೆದರಿಕೆ ಕೂಡ ಹಾಕಿರುವುದಾಗಿ ತಿಳಿದುಬಂದಿದೆ.
ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದ ಕಿರುತೆರೆ ನಟಿ ಜೀವಿತಾ ಉಲ್ಲಾಳ್ ಅವರ ಮೇಲೆ ಸ್ನೇಹಿತ ಚೇತನ್ ಟೆಮ್ಕರ್ ಹಲ್ಲೆ ನಡೆಸಿರುವುದಾಗಿ ಹೇಳಿದ್ದಾರೆ. ಚೇತನ್ ಕಂಠಪೂರ್ತಿ ಕುಡಿದು ಬಂದಿದ್ದಲ್ಲದೆ, ಒಂದು ಗ್ಲಾಸ್ ನೀರನ್ನು ಕೇಳಿ ಮನೆಯೊಳಗೆ ನುಗ್ಗಿ ಬಾಗಿಲನ್ನು ಮುಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ.
ಅಷ್ಟೇ ಅಲ್ಲದೇ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದಾನೆ. ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದಾನೆ ಎಂದು ಆರೋಪಿಸಿ ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.