Webdunia - Bharat's app for daily news and videos

Install App

ಐಟಿ ದಾಳಿಯಲ್ಲಿ ಪುನೀತ್, ಯಶ್, ಸುದೀಪ್ ‘ಬಂಡವಾಳ’ ಬಯಲು

Webdunia
ಶುಕ್ರವಾರ, 4 ಜನವರಿ 2019 (09:19 IST)
ಬೆಂಗಳೂರು: ನಿನ್ನೆಯಿಂದ ಸ್ಯಾಂಡಲ್ ವುಡ್ ತಾರೆಯರ ಮನೆಯಲ್ಲಿ ದಾಳಿ ನಡೆಸುತ್ತಿರುವ ಐಟಿ ಅಧಿಕಾರಿಗಳಿಗೆ ದೊಡ್ಡ ದಾಖಲೆಗಳ ಸಂಗ್ರಹವೇ ಸಿಕ್ಕಿದೆ ಎನ್ನಲಾಗಿದೆ.

 
ಇಂದೂ ಕೂಡಾ ಯಶ್, ಪುನೀತ್, ಸುದೀಪ್ ಮುಂತಾದ ಸ್ಟಾರ್ ಗಳ ಮನೆಯಲ್ಲಿ ತಪಾಸಣೆ ಮುಂದುವರಿಸಿರುವ ಅಧಿಕಾರಿಗಳಿಗೆ ಈ ಖ್ಯಾತ ನಟರು ಹೂಡಿರುವ ಬಂಡವಾಳಗಳ ವಿವರ ಲಭ್ಯವಾಗಿದೆ.

ಪುನೀತ್ ರಾಜ್ ಕುಮಾರ್ ಮನೆಯಲ್ಲಿ ವಿವಿಧ ಕಟ್ಟಗಳು, ಮದ್ಯದಂಗಡಿಗಳು, ವಾಣಿಜ್ಯ ವ್ಯವಹಾರಗಳ ದಾಖಲೆಗಳ ಸಂಗ್ರಹವೇ ಐಟಿ ಅಧಿಕಾರಿಗಳಿಗೆ ಸಿಕ್ಕಿದೆ.  ಇನ್ನು ಕೆಲವೇ ಕ್ಷಣಗಳಲ್ಲಿ ಪುನೀತ್ ದಂಪತಿಯನ್ನು ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ಇನ್ನು, ರಾಕಿಂಗ್ ಸ್ಟಾರ್ ಯಶ್ ಕೂಡಾ ಇದರಲ್ಲಿ ಕಮ್ಮಿಯೇನೂ ಇಲ್ಲ. ಯಶ್ ಗೆ ಸುಮಾರು 40 ಕೋಟಿ ರೂ. ಸಾಲವೂ ಇದೆ ಎಂಬ ಮಾಹಿತಿಯೂ ಬಂದಿದೆ. ಒಂದು ಬ್ಯಾಂಕಿನಲ್ಲಿ 13 ಕೋಟಿ, ಇನ್ನೊಂದು ಬ್ಯಾಂಕಿನಲ್ಲಿ 17 ಕೋಟಿ ರೂ. ಸಾಲ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಕಿಚ್ಚ ಸುದೀಪ್ ಮನೆಯಲ್ಲೂ ತಪಾಸಣೆ ಮುಂದುವರಿಸಿರುವ ಅಧಿಕಾರಿಗಳಿಗೆ ಸುದೀಪ್ ಹಲವು ಹೋಟೆಲ್ ಗಳು, ರೆಸಾರ್ಟ್ ಗಳಲ್ಲಿ, ಲಿಕ್ಕರ್ ಶಾಪ್, ರಿಯಲ್ ಎಸ್ಟೇಟ್ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ. ಅಲ್ಲದೆ, ಹಲವು ಐಶಾರಾಮಿ ಕಾರುಗಳ ಮಾಲಿಕತ್ವವನ್ನೂ ಹೊಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments