Select Your Language

Notifications

webdunia
webdunia
webdunia
webdunia

ನಟಿ ರಾಧಿಕಾ ನಿವಾಸದ ಮೇಲೆ ಐಟಿ ದಾಳಿ

ನಟಿ ರಾಧಿಕಾ ನಿವಾಸದ ಮೇಲೆ ಐಟಿ ದಾಳಿ
ಚೆನ್ನೈ , ಮಂಗಳವಾರ, 11 ಏಪ್ರಿಲ್ 2017 (15:05 IST)
ತಮಿಳು ನಚಿ ರಾಧಿಕಾ ಶರತ್ ಕುಮಾರ್ ನಿವಾಸ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಧಿಕಾ ಮಾಲೀಕತ್ವದ ರಾಡನ್ ಮೀಡಿಯಾ ಕಚೇರಿ ಮತ್ತು ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
 
ಎರಡು ದಿನಗಳ ಹಿಂದೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಬೆಂಬಲಿಗರಾಗಿರುವ ಶಾಸಕ ಶರತ್ ಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು.
 
ಸಚಿವರೊಬ್ಬರ ಮನೆಯಲ್ಲಿ ಆರ್‌.ಕೆ.ನಗರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಾಗಿ ಭಾರಿ ಮೊತ್ತದ ಹಣ ಹಂಚಿರುವ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಹಣ ಹಂಚಿರುವುದು ಕಂಡುಬಂದಿರುವುದರಿಂದ ಆರ್‌.ಕೆ.ನಗರ್ ಉಪಚುನಾವಣೆಯನ್ನು ರದ್ದುಗೊಳಿಸಲಾಗಿದೆ.
 
ರಾಧಿಕಾ ಶರತ್ ಕುಮಾರ್ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ತನಿಖೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಮಿಯನ್ನ ನಂಬಿ ಬೀದಿಗೆ ಬಿದ್ದಳಾ ನಟಿ..?