Select Your Language

Notifications

webdunia
webdunia
webdunia
webdunia

ಉದ್ಯಮಿಯನ್ನ ನಂಬಿ ಬೀದಿಗೆ ಬಿದ್ದಳಾ ನಟಿ..?

ಉದ್ಯಮಿಯನ್ನ ನಂಬಿ ಬೀದಿಗೆ ಬಿದ್ದಳಾ ನಟಿ..?
ಮುಂಬೈ , ಸೋಮವಾರ, 10 ಏಪ್ರಿಲ್ 2017 (17:08 IST)
ಆಕರ್ಷಣೆ ಎರಡು ದಿನ ಮಾತ್ರ ಎಂಬ ಮಾತು ಬಾಲಿವುಡ್ ನಟಿ ಕಿಮ್ ಶರ್ಮಾ ವಿಷಯದಲ್ಲಿ ನಿಜವಾದಂತೆ ಕಾಣುತ್ತಿದೆ. ಮೊಹಬ್ಬತೀನ್ ಚಿತ್ರದ ಮೂಲಕ ಸಿನಿ ರಸಿಕರ ಮನಗೆದ್ದಿದ್ದ ನಟಿ ಕಿಮ್ ಶರ್ಮಾ, ಆ ಬಳಿಕ ಇದ್ದಕ್ಕಿದ್ದಂತೆ ಬಾಲಿವುಡ್`ನಿಂದ ತೆರೆಮರೆಗೆ ಸರಿದಿದ್ದರು.

ಯುವರಾಜ್ ಸಿಂಗ್ ಜೊತೆ ಡೇಟಿಂಗ್ ಮೂಲಕ ಸುದ್ದಿ ಮಾಡಿದ್ದ ಕಿಮ್ ಶರ್ಮಾ 2010ರಲ್ಲಿ ಉದ್ಯಮಿ ಅಲಿ ಪುಂಜಾನಿ ಜೊತೆ ವಿವಾಹವಾಗಿ ಕೀನ್ಯಾಗೆ ಹಾರಿದ್ದರು. ಆದರೆ, ಈಗ ಕಿಮ್ ಈಗ ಸಾಂಸಾರಿಕ ಕಹಿ ಅನುಭವದೊಂದಿಗೆ ಮುಂಬೈಗೆ ವಾಪಸ್ಸಾಗಿದ್ದರೆ, ಅದು ಬರಿಗೈಯಲ್ಲಿ ಎನ್ನುತ್ತಿವೆ ವರದಿಗಳು.

ವರದಿಗಳ ಪ್ರಕಾರ, ಪತಿ ಅಲಿ ಬೇರೊಬ್ಬ ಮಹಿಳೆ ಜೊತೆ ಅನುರಕ್ತನಾಗಿದ್ದು, ಕಿಮ್`ಗೆ ಕೈಕೊಟ್ಟಿದ್ದಾನೆ. ಆಸೆ ತೀರಿಸಿಕೊಂಡ ಮೋಸ ಮಾಡಿದ್ದಾನೆ. ಕಿಮ್ ಭೇಟಿಯಾದಾಗ ದಪ್ಪಗಿದ್ದ ಅಲಿ ಈಗ ಸ್ಲಿಮ್ ಆಗಿದ್ದು, ಬೇರೊಬ್ಬಳ ಸಂಗ ಬೆಳೆಸಿದ್ದಾನಂತೆ. ಆತ ಕಿಮ್`ಗೆ ಯಾವುದೇ ಆರ್ಥಿಕ ನೆರವೂ ನೀಡಿಲ್ಲ. ಬರಿಗೈಯಲ್ಲಿ ಮುಂಬೈಗೆ ವಾಪಸ್ಸಾಗಿರುವ ತನ್ನ ನಿಜವಾದ ಹೆಸರು ಕಿಮಿ ಶರ್ಮಾ ಹೆಸರಿನಲ್ಲಿ ಉದ್ಯಮಕ್ಕೆ ಕೈಹಾಕಿದ್ದಾಳಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಪಾಲಿ ಥಿಯೇಟರ್ ಸದ್ಯದಲ್ಲೇ ಸೆಲಸಮ..!