Select Your Language

Notifications

webdunia
webdunia
webdunia
webdunia

ಕಪಾಲಿ ಥಿಯೇಟರ್ ಸದ್ಯದಲ್ಲೇ ಸೆಲಸಮ..!

ಕಪಾಲಿ ಥಿಯೇಟರ್ ಸದ್ಯದಲ್ಲೇ ಸೆಲಸಮ..!
ಬೆಂಗಳೂರು , ಸೋಮವಾರ, 10 ಏಪ್ರಿಲ್ 2017 (13:26 IST)
ಏಷ್ಯಾದಲ್ಲೇ ದೊಡ್ಡ ಚಿತ್ರಮಂದಿರವೆಂಬ ಖ್ಯಾತಿ ಗಳಿಸಿದ್ದ ಪ್ರತಿಷ್ಠಿತ ಕಪಾಲಿ ಚಿತ್ರಮಂದಿರ ಸದ್ಯದಲ್ಲೇ ಇತಿಹಾಸ ಸೇರಲಿದೆ. ಚಿತ್ರಮಂದಿರವನ್ನ ಉರುಳಿಸಿ ಆ ಜಾಗದಲ್ಲಿ ಬೃಹತ್ ಮಾಲ್ ತಲೆಎತ್ತಲಿದೆ ಎಂದು ಹೇಳಲಾಗಿದೆ. ಹಾಲಿ ಮಾಲೀಕರು ಬೆಳಗಾವಿ ಉದ್ಯಮಿಯೊಬ್ಬರಿಗೆ ಚಿತ್ರಮಂದಿರವನ್ನ ಮಾರಿದ್ದು, ಕಾಗದ ಪತ್ರಗಳ ರ್ಗಾವಣೆ ಮಾತ್ರ ಬಾಕಿ ಉಳಿದಿದೆ ಎಂದು ತಿಳಿದುಬಂದಿದೆ.

1968ರಲ್ಲಿ ನಿರ್ಮಾಣಗೊಂಡ ಈ ಚಿತ್ರಮಂದಿರವನ್ನ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಉದ್ಘಾಟನೆ ಮಾಡಿದ್ದರು. ಡಾ. ರಾಜ್ ಕುಮಾರ್ ಅಭಿನಯದ ಮಣ್ಣಿನ ಮಗ ಚಿತ್ರ ಇಲ್ಲಿ 100 ದಿನ ಪ್ರದರ್ಶನ ಕಂಡಿತ್ತು. ಒಂದು ಕಾಲದಲ್ಲಿ ಈ ಥಿಯೇಟರ್`ನಲ್ಲಿ ಸಿನಿಮಾ ರಿಲೀಸ್ ಆಗುವುದೇ ಒಂದು ಪ್ರತಿಷ್ಠೆಯ ವಿಷಯವಾಗಿತ್ತು. ದೊಡ್ಡ ದೊಡ್ಡ ನಟರ ಕಟೌಟ್`ಗಳು ಈ ಥಿಯೇಟರ್ ಮುಂದೆ ರಾರಾಜಿಸುತ್ತಿದ್ದವು.

1100ಕ್ಕೂ ಅಧಿಕ ಸೀಟ್ ಹೊಂದಿದ್ದ ಕಪಾಲಿ ಥಿಯೇಟರ್ ಹೆಚ್ಚು ಪ್ರೇಕ್ಷಕರಿಗೆ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು. ಮೆಜೆಸ್ಟಿಕ್ ವಲಯದಲ್ಲಿ ಹಲವು ಥಿಯೇಟರ್`ಗಳು ಧರಾಶಾಯಿಯಾಗಿದ್ದು, ಆ ಸಾಲಿಗೆ ಈಗ ಕಪಾಲಿ ಸೇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಭೇಟಿಯಾದ ಪುನೀತ್ ರಾಜ್ ಕುಮಾರ್