Select Your Language

Notifications

webdunia
webdunia
webdunia
webdunia

ಆ ಬಾಡಿಗೆ ಮನೆ ಯಶ್ ಗೆ ಲಕ್ಕಿ ಮನೆನಾ?ಈ ಬಗ್ಗೆ ಯಶ್ ಹೇಳಿದ್ದೇನು...?

ಆ ಬಾಡಿಗೆ ಮನೆ ಯಶ್ ಗೆ ಲಕ್ಕಿ ಮನೆನಾ?ಈ ಬಗ್ಗೆ ಯಶ್ ಹೇಳಿದ್ದೇನು...?
ಬೆಂಗಳೂರು , ಗುರುವಾರ, 19 ಏಪ್ರಿಲ್ 2018 (05:45 IST)
ಬೆಂಗಳೂರು : ಯಶ್ ಅವರ ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಯಶ್ ಅವರು ಫೇಸ್ ಬುಕ್ ಲೈವ್ ನಲ್ಲಿ ಎಲ್ಲದಕ್ಕೂ ಕ್ಲಾರಿಟಿ ಕೊಟ್ಟಿದ್ದಾರೆ.


ಯಶ್ ಅವರು ಬಾಡಿಗೆ ಮನೆಯನ್ನು 3 ತಿಂಗಳೊಳಗೆ ಬಿಟ್ಟುಕೊಡುವಂತೆ ಕೋರ್ಟ್ ಆದೇಶ ನೀಡಿದ್ದು, ಈ ಬಗ್ಗೆ ಎಲ್ಲರೂ ನಟ ಯಶ್ ಗೆ 'ಆ' ಮನೆ ಸಿಕ್ಕಾಪಟ್ಟೆ ಲಕ್ಕಿ. ಆ ಮನೆಗೆ ಯಶ್ ಕಾಲಿಟ್ಟ ಮೇಲೆಯೇ ಹಿಟ್ ಮೇಲೆ ಹಿಟ್ ಕೊಡಲು ಶುರು ಮಾಡಿದ್ದು. ಹೀಗಾಗಿ, ಆ ಮನೆಯನ್ನ ಓನರ್ ಗೆ ಬಿಟ್ಟುಕೊಡುತ್ತಿಲ್ಲ ಅಂತ ಕಾಮೆಂಟ್ ಮಾಡಿದ್ದಾರೆ.


ಆದರೆ ಇದೀಗ ಯಶ್ ಅವರು ಫೇಸ್ ಬುಕ್ ಲೈವ್ ಗೆ ಬಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ''ಆ ಮನೆ ನನಗೆ ಲಕ್ಕಿ ಅಂತ ಕೆಲವು ಪ್ರೋಗ್ರಾಂಗಳಲ್ಲಿ ನಾನು ನೋಡಿದೆ. ಆದ್ರೆ, ಅಂತಹ ಮೂಢನಂಬಿಕೆಗಳು ನನಗೆ ಇಲ್ಲ. ನಾನು ಯಾವ್ಯಾವ ಮನೆಗಳಲ್ಲಿ ಇದ್ನೋ, ಆ ಎಲ್ಲ ಮನೆಗಳಲ್ಲೂ ಹಿಟ್ ಸಿನಿಮಾ ಕೊಟ್ಟಿದ್ದೇನೆ. ನಿಜ ಹೇಳ್ಬೇಕಂದ್ರೆ, ಆ ಮನೆ ಬಿಟ್ಟ ಮೇಲೆ 'ರಾಜಾಹುಲಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಬಂದಿದ್ದು. ಎರಡೂ ಹಿಟ್ ಸಿನಿಮಾಗಳೇ. ಒಂದು ಮನೆಯಿಂದ ಸಿನಿಮಾ ಹಿಟ್ ಆಗುತ್ತೆ ಅಂತ ನಂಬುವ ವೀಕ್ ವ್ಯಕ್ತಿ ನಾನಲ್ಲ. ನನ್ನ ಕೆಲಸ, ನನ್ನ ಪರಿಶ್ರಮದಿಂದ ಗೆಲ್ತೀನಿ, ಗೆಲ್ಲುತ್ತಿದ್ದೇನೆ ಎಂಬ ನಂಬಿಕೆ ಇಟ್ಟುಕೊಂಡಿರುವ ವ್ಯಕ್ತಿ ನಾನು. ಅದು ಯಶ್ ಗೆ ಅದೃಷ್ಟದ ಮನೆ. ಹೀಗಾಗಿ ಅವರು ಅದನ್ನ ಬಿಡುತ್ತಿಲ್ಲ ಅಂತ ಯಾರೋ ನಂಬಿಕೊಂಡಿದ್ದಾರೆ. ಅದು ಸತ್ಯ ಅಲ್ಲ. ಮನೆ ಇಲ್ಲದೆ ಬದುಕಿ ಬಂದವನು ನಾನು. ಆ ಮನೆಯಿಂದ ನನಗೇನೂ ಅದೃಷ್ಟ ಇಲ್ಲ. ನಾನು ಒಳ್ಳೆ ಸಿನಿಮಾ ಮಾಡಿದ್ರೆ ನೋಡ್ತೀರಾ, ಇಲ್ಲ ಅಂದ್ರೆ ನಾನು ಯಾವ ಮನೆಯಲ್ಲಿ ಇದ್ದರೇನು’ ಎಂದು ಯಶ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ ಕುಟುಂಬದವರು 3 ತಿಂಗಳೊಳಗೆ ಮನೆ ಖಾಲಿ ಮಾಡುವಂತೆ ಕೋರ್ಟ್ ಆದೇಶ