ಸಂದರ್ಶನ ಮಾಡುತ್ತಾ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ಹಿಂದಿ ಸಂದರ್ಶಕ!

Webdunia
ಶುಕ್ರವಾರ, 14 ಅಕ್ಟೋಬರ್ 2022 (09:30 IST)
ಮುಂಬೈ: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ದೈವದ ಕುರಿತಾದ ಕತೆ ಎಂಬ ಕಾರಣಕ್ಕೆ ಎಲ್ಲರೂ ಭಕ್ತಿ ಭಾವದಿಂದ ವೀಕ್ಷಿಸುತ್ತಿದ್ದಾರೆ.

ಇದೀಗ ಸಿನಿಮಾ ಹಿಂದಿಯಲ್ಲೂ ಬಿಡುಗಡೆಯಾಗುತ್ತಿದೆ. ನಾಳೆಯಿಂದ ಹಿಂದಿಯಲ್ಲಿ ಡಬ್ ಆಗಿ ಕಾಂತಾರ ಬಿಡುಗಡೆಯಾಗುತ್ತಿದೆ. ಇದಕ್ಕಾಗಿ ರಿಷಬ್ ಶೆಟ್ಟಿ ಮುಂಬೈನಲ್ಲಿ ಪ್ರಚಾರ ನಡೆಸಿದ್ದಾರೆ.

ಹಿಂದಿ ಮಾಧ್ಯಮವೊಂದರ ಸಂದರ್ಶಕರೊಬ್ಬರು ರಿಷಬ್ ಶೆಟ್ಟಿಯವರನ್ನು ಸಂದರ್ಶನ ಮಾಡುತ್ತಿದ್ದರು. ಸಂದರ್ಶನ ಮಾಡುತ್ತಾ ತಾನೂ ನಿಂತು ರಿಷಬ್ ಗೂ ಎದ್ದು ನಿಲ್ಲಲು ಹೇಳಿದ ಸಂದರ್ಶಕ ನೇರವಾಗಿ ರಿಷಬ್ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಗಲಿಬಿಲಿಗೊಂಡ ರಿಷಬ್ ಹೀಗೆಲ್ಲಾ ಮಾಡಬೇಡಿ ಎಂದಾಗ ಸಂದರ್ಶಕ ನಾನು ಇದುವರೆಗೆ ಈ ರೀತಿ ಮಾಡಿರಲಿಲ್ಲ. ಆದರೆ ಈ ಸಿನಿಮಾ ನೋಡಿದ ಮೇಲೆ ನನಗೆ ನಿಮಗೆ ನಮಸ್ಕರಿಸಬೇಕೆನಿಸಿತು. ಅಂತಹ ಅದ್ಭುತ ಸಿನಿಮಾವಿದು ಎನ್ನುತ್ತಾರೆ. ಈ  ವಿಡಿಯೋ ಈಗ ವೈರಲ್ ಆಗಿದೆ.

-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಕಾಪಿರೈಟ್‌ ಉಲ್ಲಂಘಟನೆ: ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿಗೆ ಬರೋಬ್ಬರಿ ₹25 ಲಕ್ಷ ದಂಡ

ಶೂಟಿಂಗ್‌ ವೇಳೆ ಯುವ ನಟಿಗೆ ಲೈಂಗಿಕ ದೌರ್ಜನ್ಯ; ಮಾಲಿವುಡ್‌ ಖ್ಯಾತ ನಿರ್ದೇಶಕ ರಂಜಿತ್ ಅರೆಸ್ಟ್

ಭಾರತ ಚಿತ್ರರಂಗದಲ್ಲಿ ಮತ್ತೊಂದು ದಾಖಲೆ ಬರೆದ ಧುರಂಧರ್‌ 2: ಬಾಹುಬಲಿ, ಪುಷ್ಪಾ, ದಂಗಲ್‌ ಚಿತ್ರಗಳ ದಾಖಲೆಗಳು ಉಡೀಸ್‌

ಇನ್ನೊಂದು ಪ್ರೊಡಕ್ಷನ್ ರೆಡಿ ಆಗ್ತಿದೆ ಎಂದು ಗುಡ್ ನ್ಯೂಸ್ ಕೊಟ್ಟ ನಟಿ ಹರ್ಷಿಕಾ ಪೂಣಚ್ಚ, ಭುವನ್

ರಾಜ್‌ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್‌ಫಾಲೋ ಮಾಡಿರುವ ರಿಷಬ್ ಶೆಟ್ಟಿ, ಈ ಮೂವರನ್ನು ಫಾಲೋ ಮಾಡ್ತಿದ್ದಾರೆ

ಮುಂದಿನ ಸುದ್ದಿ
Show comments