Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಮರ್ಡರ್ ಕೇಸ್: ನಟ ದರ್ಶನ್ ಗೆ ಇಂದು ಮಹತ್ವದ ದಿನ

Darshan
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಇಂದು ನಟ ದರ್ಶನ್ ಗೆ ಮಹತ್ವದ ದಿನವಾಗಿದೆ. ಇಂದು ಅವರು ಕೋರ್ಟ್ ಗೆ ಖುದ್ದು ಹಾಜರಾತಿ ವಿಚಾರವಾಗಿ ಕೋರ್ಟ್ ಆದೇಶ ಹೊರಡಿಸಲಿದೆ.

ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆ ಪ್ರಗತಿಯಲ್ಲಿದೆ. ಈ ನಡುವೆ ಪ್ರಮುಖ ಸಾಕ್ಷಿ ವಿಚಾರಣೆ ವೇಳೆ ದರ್ಶನ್ ರನ್ನು ಖುದ್ದಾಗಿ ಕೋರ್ಟ್ ಗೆ ಹಾಜರುಪಡಿಸಬೇಕು ಎಂಬುದು ಅವರ ಪರ ವಕೀಲರ ವಾದವಾಗಿದೆ. ಆದರೆ ಇದಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪವೆತ್ತಿದ್ದರು.

ಹೀಗಾಗಿ ಎರಡೂ ಕಡೆ ವಾದ ಆಲಿಸಿದ 59 ನೇ ಸಿಸಿಎಚ್ ಕೋರ್ಟ್ ಇಂದು ತೀರ್ಪು ನೀಡುವುದಾಗಿ ಘೋಷಿಸಿತ್ತು. ಇಂದು ದರ್ಶನ್ ಖುದ್ದು ಹಾಜರಾಗಲು ಕೋರ್ಟ್ ಅನುಮತಿ ನೀಡುತ್ತಾ ನೋಡಬೇಕಿದೆ.

ಪ್ರಕರಣದಲ್ಲಿ 19 ನೇ ಸಾಕ್ಷ್ಯ ವಿಚಾರಣೆ ನಡೆಯಬೇಕಿದೆ. ಈ ಸಾಕ್ಷಿಯ ವಿಚಾರಣೆ ವೇಳೆ ಖುದ್ದಾಗಿ ಹಾಜರುಪಡಿಸಿದರೆ ಸಾಕ್ಷ್ಯ ವಿಚಾರಣೆ ವೇಳೆ ಅನುಮಾನಗಳಿದ್ದರೆ ಸ್ಥಳದಲ್ಲೇ ದರ್ಶನ್ ರಿಂದ ಮಾಹಿತಿ ಪಡೆಯಬಹುದು ಎಂಬುದು ಅವರ ಪರ ವಕೀಲರ ವಾದವಾಗಿದೆ. ಆದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದರೆ ಸಾಕು ಎನ್ನುವುದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದವಾಗಿದೆ. ಅವರನ್ನು ಕೋರ್ಟ್ ಗೆ ಕರೆತಂದರೆ ಅನಗತ್ಯ ಗೊಂದಲಗಳು, ಗದ್ದಲಗಳು, ನೂಕುನುಗ್ಗಲು ಉಂಟಾಗುತ್ತದೆ ಎನ್ನುವುದು ಅವರ ವಾದವಾಗಿದೆ. ಇಂದು ಕೋರ್ಟ್ ನೀಡುವ ಅದೇಶದ ಮೇರೆಗೆ ದರ್ಶನ್ ಖುದ್ದು ಹಾಜರಾಗುತ್ತಾರಾ ಎನ್ನುವುದು ನಿರ್ಧಾರವಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟರು ದೇವಲೋಕದಿಂದ ಇಳಿದು ಬಂದವರಾ… ಏರ್ ಪೋರ್ಟ್ ನಲ್ಲಿ ಅಲ್ಲು ಅರ್ಜುನ್ ವರ್ತನೆಗೆ ಟೀಕೆ Video