ದರ್ಶನ್‌ಗಾಗಿ ಪೂಜೆ ಮಾಡುತ್ತಿದ್ದರೆ ನಾನು ಬರ್ತಿರ್ಲಿಲ್ಲ: ನಟ ಜಗ್ಗೇಶ್

Sampriya
ಬುಧವಾರ, 14 ಆಗಸ್ಟ್ 2024 (17:44 IST)
Photo Courtesy X
ಬೆಂಗಳೂರು: ಈ  ಪೂಜೆ ದರ್ಶನ್‌ಗೋಸ್ಕರ ಮಾಡುತ್ತಿದ್ದರೆ ನಾನು ಬರುತ್ತಿರಲಿಲ್ಲ ಎಂದು ನಟ ಜಗ್ಗೇಶ್ ಅವರು ಇಂದು ಕಲಾವಿದರ ಸಂಘದಲ್ಲಿ ಹಮ್ಮಿಕೊಂಡಿದ್ದ ಹೋಮ ಹವನದಲ್ಲಿ ಭಾಗಿ ಮಾತನಾಡಿದರು.  

ಚಿತ್ರರಂಗದ ಏಳಿಗೆಗಾಗಿ ಇಂದು ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆಯ ಕಾರ್ಯಕ್ರಮ ನಡೆಸಲಾಯಿತು. ಈ ಮಹಾಯಾಗವನ್ನು ದರ್ಶನ್‌ಗೋಸ್ಕರ ಮಾಡಲಾಗುತ್ತಿದೆ ಎಂಬ ಮಾತು ಹರಿದಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್ ಅವರು,  ದರ್ಶನ್‌ಗೋಸ್ಕರ ಪೂಜೆ ಮಾಡಿದ್ರೆ ನಾನು ಬರುತ್ತಿರಲಿಲ್ಲ. ಆದರೆ ಈ ಪೂಜೆ ದರ್ಶನ್‌ಗಾಗಿ ಅಲ್ಲ, ಕಲಾವಿದರ ಒಳಿತಿಗಾಗಿ ಮಾಡಿರೋದು. ನನಗೂ ಬೇರೆ ಬೇರೆ ವಲಯದಿಂದ ಕರೆ ಮಾಡಿ ಕೇಳಿದ್ದರು. ನನಗೂ ಈ ಬಗ್ಗೆ ಡೌಟ್ ಇತ್ತು. ಮಾಹಿತಿ ಪಡೆದೆ. ಆದರೆ ಈ ಪೂಜೆ ಒಟ್ಟು ನಮ್ಮ ಚಿತ್ರರಂಗದ ಬೆಳವಣಿಗೆಗೆ ಎಂದರು.

ಇನ್ನೂ ಪೂಜೆಯಲ್ಲಿ ನಾಗದೇವದರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಹೇಳಿದ್ದಾರೆ. ಆಧ್ಯಾತ್ಮಕವಾಗಿ  ನಾವು ಇದ್ದೇವೆ. ದೇವರು ನಂಬಿರುವವರ ಬೆಳವಣಿಗೆ ಹೇಗಿದೆ, ನಂಬದೇ ಇರುವವರ ಬೆಳವಣಿಗೆ ಹೇಗಿದೆ ನೋಡಿ ಎಲ್ಲರಿಗೂ ಅಲ್ಲೇ ಉತ್ತರ ಸಿಗುತ್ತದೆ ಎಂದು ಜಗ್ಗೇಶ್ ಮಾತನಾಡಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮುಂದಿನ ಸುದ್ದಿ
Show comments