Select Your Language

Notifications

webdunia
webdunia
webdunia
webdunia

ಬಿಗ್‌ಬಾಸ್‌ ಆರಂಭಕ್ಕೆ ದಿನಗಣನೆ: ದೊಡ್ಮನೆಗೆ ಎಂಟ್ರಿಯಾಗಲಿರುವ ತೇಜಸ್ವಿನಿ ಗೌಡ, ಯಶ್ಮಿ ಗೌಡ

Bigg Boss Telugu

Sampriya

ಹೈದರಾಬಾದ್ , ಬುಧವಾರ, 14 ಆಗಸ್ಟ್ 2024 (15:13 IST)
Photo Courtesy X
ಹೈದರಾಬಾದ್‌: ತೆಲುಗಿನ ಸ್ಟಾರ್ ಮಾ ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟರ ಹೊಸ ಪ್ರೋಮೊ ಈಚೆಗೆ ಬಿಡುಗಡೆಯಾಗಿದ್ದು, ಅದರ ಬೆನ್ನಲ್ಲೇ ಶೋಗೆ ಸ್ಪರ್ಧಿಗಳು ಯಾರೆಂಬುದರ ಬಗ್ಗೆ ಚರ್ಚೆಗಳು ಶುರುವಾಗಿವೆ.

ಈ ಬಾರಿಯ ಆವೃತ್ತಿಯಲ್ಲಿ ಕನ್ನಡದ ನಟಿಯರು ಕೂಡ ಈ ಬಾರಿ ಇರಲಿದ್ದಾರೆ. ಸಂಭಾವ್ಯ ಅಭ್ಯರ್ಥಿಗಳ ಹೆಸರು ವೈರಲ್ ಆಗುತ್ತಿದೆ.  ಅದರಲ್ಲಿ ನಟ, ನಟಿಯರು, ಯೂಟ್ಯೂಬರ್‌, ಸುದ್ದಿ ವಾಚಕಿ, ಕೃಷಿಕ, ಗಾಯಕರು, ನಿರೂಪಕರು ಮತ್ತು ಜ್ಯೋತಿಷಿಗಳು ಇದ್ದಾರೆ ಎಂದು ವರದಿಯಾಗಿದೆ.

ಜ್ಯೋತಿಷ್ಯ ವೇಣುಸ್ವಾಮಿ, ಯೂಟ್ಯೂಬರ್ ಬರೆಲ್ಲಕ್ಕ, ಯೂಟ್ಯೂಬರ್ ಯಾದಂ ರಾಜು ರಿತು ಚೌಧರಿ, ಕಿರುತೆರೆ ತಾರೆಯರಾದ ಅಂಜಲಿ, ಯಶ್ಮಿ ಗೌಡ, ತೇಜಸ್ವಿನಿ ಗೌಡ, ಹಿರಿಯ ನಟಿ ಸನಾ, ನಟ ಅನಿಲ್ ಗೀಲಾ, ಹಾಸ್ಯನಟ ಬುಂಚಿಕ್ ಬಬ್ಲು, ಕಿರಾಕ್ ಆರ್‌ಪಿ, ರಿಂಗ್ ರಿಯಾಜ್, ನಿರೂಪಕಿ ವಿಂಧ್ಯಾ ವಿಶಾಖ, ಪಾಗಲ್ ಪವಿತ್ರಾ ಹೀಗೆ ಹಲವು ಸಂಭವ್ಯರ ಹೆಸರು ಚಾಲ್ತಿಯಲ್ಲಿದೆ.

ನಟಿ ರೇಖಾ ಬೋಜ್, ಸಾವಯವ ಕೃಷಿ ತಜ್ಞ ನೇತ್ರಾ ರೆಡ್ಡಿ, ಸುದ್ದಿ ವಾಚಕಿ ಕಲ್ಯಾಣಿ,ಧಾರಾವಾಹಿ ನಟ ಇಂದ್ರನೀಲ್ ಸೇನ್‌ಗುಪ್ತ, ನಟ ಅಬ್ಬಾಸ್, ನಟ ರೋಹಿತ್, ಗಾಯಕ ಸಾಕೇತ್ ಕೊಮಂದೂರಿ, ಫೆಮಿನಾ ಮಿಸ್ ಇಂಡಿಯಾ ತೆಲಂಗಾಣ 2023 ರ ಊರ್ಮಿಳಾ ಚೌಹಾಣ್ ಅವರ ಹೆಸರು ಕೂಡ ಇದೆ.

ಇದರಲ್ಲಿ ಯಶ್ಮಿ ಗೌಡ ಕರ್ನಾಟಕದವರು. ಇದರ ಜೊತೆಗೆ ತೇಜಸ್ವಿನಿ ಗೌಡ ಕೂಡ ಕನ್ನಡದವರೇ ಆಗಿದ್ದಾರೆ. ಇವರು ಈಗ ತೆಲುಗಿನ ಧಾರಾವಾಹಿಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರು ದೊಡ್ಮನೆಗೆ ಎಂಟ್ರಿಯಾದರೆ ಕನ್ನಡಿಗರ ಬೆಂಬಲ ಪಡೆಯಲಿದ್ದಾರೆ ಎನ್ನಲಾಗಿದೆ.

ನಾಗಾರ್ಜುನ ನಿರೂಪಣೆಯ ಬಿಗ್ ಬಾಸ್ ಆವೃತ್ತಿ ಸೆಪ್ಟೆಂಬರ್ 8 ರ ಭಾನುವಾರ ಸಂಜೆ 6 ರಿಂದ ಪ್ರಾರಂಭವಾಗಲಿದೆ. ನಂದಮೂರಿ ಕುಟುಂಬದಿಂದ ತೆಲುಗು ಸಿನೆಮಾ ರಂಗಕ್ಕೆ ನಾಯಕನಾಗಿ ಕಾಲಿಟ್ಟಿರುವ ಚೈತನ್ಯ ಕೃಷ್ಣ ಅವರು ಬಿಗ್‌ಬಾಸ್‌ ಗೆ ಬರಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಮರ್ಡರ್ ವೇಳೆ ಹಾಕಿದ್ದ ಚಪ್ಪಲಿಯಿಂದ ಪವಿತ್ರಾ ಗೌಡಗೆ ಕಂಟಕ