24 ವರ್ಷದಲ್ಲಿ ಇದೆಲ್ಲಾ ಬೇಕಿತ್ತಾ ಅನಿಸ್ತು, ಜೈಲು ಅನುಭವದ ವಿಡಿಯೋ ಹಂಚಿಕೊಂಡ ಸೋನು ಗೌಡ

Sampriya
ಶನಿವಾರ, 13 ಏಪ್ರಿಲ್ 2024 (14:21 IST)
photo Courtesy Instagram
ಬೆಂಗಳೂರು: ಮಗು ದತ್ತು ಪಡೆದ ಪ್ರಕರಣದಲ್ಲಿ 10 ದಿನ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದ ಬಿಗ್‌ಬಾಸ್‌ ಸ್ಪರ್ಧಿ ಸೋನು ಗೌಡ ಅವರು ಷರುತ್ತು ಬದ್ಧ ಜಾಮೀನು ಮೂಲಕ ಹೊರಬಂದಿದ್ದಾರೆ.  ಬಿಡುಗಡೆ ನಂತರ ಫುಲ್ ಸೈಲೆಂಟ್‌ ಆಗಿದ್ದ ಸೋನು ಅವರು ಯುಗಾದಿ ದಿನದಂದು ಸೀರೆಯಲ್ಲಿ ಫೋಸ್ ಕೊಟ್ಟ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತೇ ಆಕ್ಟೀವ್ ಆದರು.

ಇದೀಗ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಸೋನು ಗೌಡ ಜೈಲಿನ ಅನುಭವ ಹಂಚಿಕೊಂಡು ವಿಡಿಯೋ ಶೇರ್ ಮಾಡಿದ್ದಾರೆ.

ʻʻಜೈಲಿಗೆ ಹೋದಾಗತುಂಬಾನೇ ಬೇಜಾರಾಯ್ತು. 24 ವರ್ಷಕ್ಕೆ ನನಗೆ ಇದೆಲ್ಲ ಬೇಕಿತ್ತಾ ಅನಿಸ್ತು. ಕೊಲೆ ಮಾಡಿ ಬಂದವರ ಜತೆ  ನಾಲ್ಕು ಗೋಡೆಗಳ ಮಧ್ಯೆ ಇದ್ದು ಬಂದಿದ್ದೀನಿ ಎಂದು ಕೊಂಡಾಗ ಅದನ್ನು ಹೇಳಲಾಗುತ್ತಿಲ್ಲ.  ಮೂರು ದಿನಕ್ಕೆ ಒಮ್ಮೆ ಫೋನ್ ಕೊಡುತ್ತಿದ್ದರು. ಕುಟುಂಬದವರಿಗೆ ಅಥವಾ ವಕೀಲರಿಗೆ ಫೋನ್ ಮಾಡಿ 3-4 ನಿಮಿಷ ಮಾತನಾಡಲು ಅವಕಾಶವಿತ್ತು. ಇದರಿಂದ ವ್ಯಕ್ತಿಯ ಬೆಲೆ ಎಷ್ಟು ಎನ್ನುವುದು ಗೊತ್ತಾಯಿತು' ಎಂದರು.  

ʻʻಟ್ರೋಲ್‌ ಪೇಜ್‌ಗಳು ನನಗೆ ತುಂಬ ಸಪೋರ್ಟ್‌ ಮಾಡಿದವು. ಇದಾದ ಬಳಿಕ ಹೊರ ಬಂದ ಮೇಲೆ ಫೋನ್‌ ನೋಡಿಲ್ಲ. ನನ್ನದು ಸಣ್ಣ ಸರ್ಕಲ್‌. ನನ್ನ ಅಣ್ಣ ಎಲ್ಲರೂ ನನ್ನ ಜತೆ ನಿಂತರು. ನನ್ನ ಪ್ರಕರಣದ ಬಗ್ಗೆ ಹೆಚ್ಚಿನದ್ದನ್ನು ಹೇಳೋಕೆ ಆಗಲ್ಲ. ಈಗ ನಾನು ಆರಾಮದಾಯಕವಾಗಿ ಹೊರಗಡೆ ಓಡಾಡುತ್ತಿದ್ದೇನೆ. ರೀಲ್ಸ್‌ ಮಾಡುತ್ತೇನೆ. ನಿಮ್ಮ ಸಪೋರ್ಟ್‌ ನನಗೆ ಬೇಕು. ಜೈಲಿನಲ್ಲಿ ತುಂಬ ಸೊಳ್ಳೆ ಇರ್ತಿತ್ತು. ಅದು ಬಹಳ ಕಷ್ಟವಾಗಿತ್ತು. 24 ವಯಸ್ಸಿನಲ್ಲಿ ಇದೆಲ್ಲ ನೋಡಿ ಬಿಟ್ಟೆ ಎನ್ನುವ ಬೇಜಾರು ಅಷ್ಟೇ' ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಪವಿತ್ರಾ ಗೌಡಗೆ ಮಾಡಿದಂತೇ ಈ ಕಿರುತೆರೆ ನಟಿಗೂ ಮಾಡ್ತಿದ್ದ ಕಾಮುಕ: ಆದ್ರೆ ನಟಿ ಮಾಡಿದ್ದೇನು

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ಮುಂದಿನ ಸುದ್ದಿ
Show comments