Publish Date: Mon, 29 Jun 2020 (16:45 IST)
Updated Date: Mon, 29 Jun 2020 (16:47 IST)
ಚಲನಚಿತ್ರ ಪ್ರಸಿದ್ಧ ಗಾಯಕಿ ಎಸ್. ಜಾನಕಿ ನಿಧನರಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿವೆ.
ಈ ಸುದ್ದಿಗಳಿಗೆ ಖುದ್ದು ಎಸ್.ಜಾನಕಿ ಪ್ರತಿಕ್ರಿಯೆ ನೀಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ ಎಂದಿದ್ದಾರೆ.
ಸುಳ್ಳು ಸುದ್ದಿ ನಂಬಬೇಡಿ ಹಾಗೂ ಹರಡಬೇಡಿ ಎಂದು ಎಸ್.ಜಾನಕಿ ಕುಟುಂಬದವರು ಮನವಿ ಮಾಡಿದ್ದಾರೆ.
ನಾನು ಆರೋಗ್ಯವಾಗಿದ್ದೇನೆ. ನನ್ನ ಆರೋಗ್ಯದ ಕುರಿತು ಯಾರೂ ಚಿಂತಿಸಬೇಡಿ ಎಂದು ಎಸ್.ಜಾನಕಿ ಸ್ಪಷ್ಟನೆ ನೀಡಿದ್ದಾರೆ.