Select Your Language

Notifications

webdunia
webdunia
webdunia
webdunia

`ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಆನ್`ಲೈನ್`ನಲ್ಲಿ ವೈರಲ್

`ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಆನ್`ಲೈನ್`ನಲ್ಲಿ ವೈರಲ್
ಬೆಂಗಳೂರು , ಬುಧವಾರ, 3 ಮೇ 2017 (18:53 IST)
ಡ್ಯಾನಿಶ್ ಸೇಠ್ ಯಾರಿಗೆ ಗೊತ್ತಿಲ್ಲ ಹೇಳಿ. ರೇಡಿಯೋ ಜಾಕಿಯಾಗಿ ಗಮನ ಸೆಳೆದಿದ್ದ ಸೇಠ್, ಆರ್`ಸಿಬಿ ತಂಡದ ಜೊತೆ ಕಾಮಿಡಿ ಸೇರಿದಂತೆ ಟಿ.ವಿ ಚಾನಲ್`ಗಳಲ್ಲಿ ತನ್ನ ಕಾಮಿಡಿ ಮೂಲಕ ಕಮಾಲ್ ಮಾಡಿದ್ದಾರೆ. ಡ್ಯಾನಿಶ್ ಸೇಠ್ ಅಲಿಯಾಸ್ ನಾಗರಾಜ್  ಈಗ ರಾಜಕಾರಣಿಯಾಗಿದ್ದಾರೆ.

ನೀವಂದುಕೊಂಡಂಗೆ ಅವರು ರಿಯಲ್ ಪೊಲೀಟಿಶಿಯನ್ ಅಲ್ಲ, ರೀಲ್ ಪೊಲಿಟಿಶಿಯನ್ ಆಗಿದ್ದಾರೆ. `ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಎಂಬ ಕಾಮಿಡಿ ಪ್ರಧಾನ ಚಿತ್ರದಲ್ಲಿ ನಟಿಸಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಿರ್ಮಿಸಿದ್ದ ಹೇಮಂತ್ ರಾವ್ ಮತ್ತು ಪುಷ್ಕರ್ ಚಿತ್ರ ಮಾಡುತ್ತಿದ್ದು, ಸಾದ್ ಖಾನ್ ಆಕ್ಷನ್ ಕಟ್ ಹೇಳಿದ್ದಾರೆ.

`ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಚಿತ್ರದ ಟೀಸರ್ ಈಗಾಗಲೇ ಆನ್ ಲೈನ್`ನಲ್ಲಿ ವೈರಲ್ ಆಗಿದೆ. ತಮ್ಮ ಎಂದಿನ ಕಾಮಿಡಿ ಡೈಲಾಗ್ ಮೂಲಕ ನಾಗರಾಜ್ ಗಮನ ಸೆಳೆಯುತ್ತಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ 2 ಪ್ರಧಾನ ನಟರ ಸಂಭಾವನೆ ಎಷ್ಟು ಗೊತ್ತಾ?