Select Your Language

Notifications

webdunia
webdunia
webdunia
webdunia

ಬಾಹುಬಲಿ 2 ಪ್ರಧಾನ ನಟರ ಸಂಭಾವನೆ ಎಷ್ಟು ಗೊತ್ತಾ?

ಬಾಹುಬಲಿ 2 ಪ್ರಧಾನ ನಟರ ಸಂಭಾವನೆ ಎಷ್ಟು ಗೊತ್ತಾ?
Hyderabad , ಬುಧವಾರ, 3 ಮೇ 2017 (07:34 IST)
ಹೈದರಾಬಾದ್: ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚುತ್ತಿರುವ ಬಾಹುಬಲಿ 2 ಪ್ರಧಾನ ಆಕರ್ಷಣೆ ಪ್ರಭಾಸ್ ಮತ್ತು ರಾಣಾ ದಗ್ಗುಬತಿ. ಒಟ್ಟಾರೆ ಚಿತ್ರವೇ ಈ ಮಟ್ಟಿಗೆ ದುಡ್ಡು ಮಾಡುತ್ತಿದ್ದರೆ, ನಟರಿಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಕುತೂಹಲವಿರಬಹುದು.

 
ವಿಶ್ಯುವಲ್, ಫೈಟಿಂಗ್ ಹಾಗೂ ಒಟ್ಟಾರೆ ದೃಶ್ಯ ಸಂಯೋಜನೆಯಲ್ಲಿ ಯಾವುದೇ ಹಾಲಿವುಡ್ ಸಿನಿಮಾಗಳಿಗೆ ಕಮ್ಮಿಯಿಲ್ಲದಂತೆ ತಯಾರಾದ ಚಿತ್ರದ ಪ್ರತೀ ಫ್ರೇಮ್ ಕೂಡಾ ಅದ್ಧೂರಿತನ ತೋರಿಸುತ್ತದೆ.

ಅಷ್ಟೆಲ್ಲಾ ವೈಭವೋಪೇತ ಸಿನಿಮಾಗೆ ಐದು ವರ್ಷ ಕಲಾವಿದರು, ತಂತ್ರಜ್ಞರು ದುಡಿದಿದ್ದಾರೆ. ಅಷ್ಟೆಲ್ಲಾ ಮಾಡಿದ ಮೇಲೆ ವೇತನವನ್ನೂ ಹಾಗೇ ನೀಡಬೇಕಲ್ಲವೇ? ಪ್ರಭಾಸ್ ಮತ್ತು ರಾಣಾ ಜತೆಗೆ, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ, ನಾಸಿರ್, ಸತ್ಯರಾಜ್ ಪ್ರಮುಖ ಪಾತ್ರಧಾರಿಗಳು. ಇವರ ಸಂಭಾವನೆ ವಿವರವನ್ನು ಮಾಧ್ಯಮವೊಂದು ವರದಿ ಮಾಡಿದೆ.

ಪ್ರಭಾಸ್ 25 ಕೋಟಿ ರೂ., ರಾಣಾ 15 ಕೋಟಿ ರೂ. ಅನುಷ್ಕಾ ಶೆಟ್ಟಿ ಮತ್ತು ತಮನ್ನಾ 5 ಕೋಟಿ, ಸತ್ಯ ರಾಜ್ 2 ಕೋಟಿ, ರಮ್ಯ ಕೃಷ್ಣ 2.5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ರಾಜಮೌಳಿಗೆ ರಜಿನಿಕಾಂತ್, ಸುದೀಪ್, ಮಹೇಶ್ ಬಾಬು ಸೇರಿದಂತೆ ಸ್ಟಾರ್`ಗಳಿಂದ ಪ್ರಶಂಸೆಗಳ ಸುರಿಮಳೆ