ನನಗೆ ಬಿಗ್ ಬಾಸ್ ನಲ್ಲಿ ಒಂದು ಅವಕಾಶ ಕೊಡಿ: ಅಂಗಲಾಚಿದ ಹುಚ್ಚ ವೆಂಕಟ್

Krishnaveni K
ಶುಕ್ರವಾರ, 27 ಸೆಪ್ಟಂಬರ್ 2024 (13:41 IST)
Photo Credit: Instagram
ಬೆಂಗಳೂರು: ಬಿಗ್ ಬಾಸ್ ನಲ್ಲಿ ಎಲ್ಲರ ಮನೆ ಮಾತಾಗಿದ್ದ ಹುಚ್ಚ ವೆಂಕಟ್ ಇದೀಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಕೆಲವು ಸಮಯದ ಹಿಂದೆ ಬೀದಿ ಬೀದಿ ತಿರುಗಾಡುತ್ತಿದ್ದ ಹುಚ್ಚ ವೆಂಕಟ್ ಈಗ ಬಿಗ್ ಬಾಸ್ ನಲ್ಲಿ ಅವಕಾಶ ಕೊಡಿ ಎಂದು ವಿಡಿಯೋ ಹರಿಯಬಿಟ್ಟಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಎರಡೇ ದಿನಗಳ ಮೊದಲು ಹುಚ್ಚ ವೆಂಕಟ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಕಲರ್ಸ್ ವಾಹಿನಿಗೆ ಮತ್ತು ಕಿಚ್ಚ ಸುದೀಪ್ ಗೆ ಮನವಿ ಮಾಡಿದ್ದಾರೆ. ನನಗೆ ಒಂದು ಅವಕಾಶ ಕೊಡಿ ಎಂದು ಅಂಗಲಾಚಿದ್ದಾರೆ.

‘ಇದು ಕಲರ್ಸ್ ಕನ್ನಡದವರಿಗೆ, ಇದು ಸುದೀಪ್ ಅವರಿಗೆ ಕೂಡಾ.. ನನಗೆ ಒಂದು ಅವಕಾಶ ಕೊಡಿ ಮತ್ತೆ ಬಿಗ್ ಬಾಸ್ ಗೆ ಬರಕ್ಕೆ. ಖಂಡಿತಾ ನಾನು ಉಳಿಸ್ಕೋತಿನಿ. ನಾನು ಗಲಾಟೆ ಮಾಡಲ್ಲ, ಎಲ್ಲಾ ಟಾಸ್ಕ್ ಮಾಡ್ತೀನಿ. ಒಂದು ದಿನಕ್ಕೆ ಕರೆದರೂ ಬರ್ತೀನಿ, ಒಂದು ವಾರಕ್ಕೆ ಕರೆದರೂ ಬರ್ತೀನಿ, ಅಲ್ಲೇ ಫಿನಾಲೆವರೆಗೆ ಇರಿ ಅಂದ್ರೂ ಇರ್ತೀನಿ. ಒಟ್ಟಿನಲ್ಲಿ ನನ್ನ ಕರೀರಿ. ಯಾಕೆಂದರೆ ಎಲ್ಲರೂ ನನ್ನನ್ನು ಬಿಗ್ ಬಾಸ್ ಹುಚ್ಚ ವೆಂಕಟ್ ಅಂತಿದ್ದಾರೆ. ಬಿಗ್ ಬಾಸ್ ಬಂದ ಮೇಲೆ ನೀವು ಹೋಗಲ್ವಾ ಎಂದು ಕೇಳ್ತಿದ್ದಾರೆ. ಸುದೀಪ್ ಅವರು ಮನಸ್ಸು ಮಾಡಿದ್ರೆ ಆಗುತ್ತೆ. ಒಂದು ಅವಕಾಶ ಕೊಡಿ ಎಂದು ಹುಚ್ಚ ವೆಂಕಟ್ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 3 ರ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್, ಮನೆಯೊಳಗೆ ಸಹಸ್ಪರ್ಧಿ ಮೇಲೆ ಹಲ್ಲೆ ನಡೆಸಿ ಗಲಾಟೆ ಎಬ್ಬಿಸಿದ್ದರು. ಕೆಲವು ಸಮಯದ ಹಿಂದೆ ಭಿಕ್ಷುಕನಂತೆ ಮನೆ ಮನೆ ತಿರುಗಾಡುವ ವಿಡಿಯೋವೂ ವೈರಲ್ ಆಗಿತ್ತು. ಇದೀಗ ಬಿಗ್ ಬಾಸ್ ಗೆ ಅವಕಾಶ ಕೇಳಿಕೊಂಡು ಸುದ್ದಿಯಾಗಿದ್ದಾರೆ.
 
https://www.facebook.com/share/v/cF8ASsgYPVSBCwmK/?mibextid=oFDknk

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಮುಂದಿನ ಸುದ್ದಿ
Show comments