Select Your Language

Notifications

webdunia
webdunia
webdunia
webdunia

ನಿಮ್ಮ ನಷ್ಟವನ್ನು ಹೇಗೆ ಸಹಿಸಿಕೊಳ್ಳಲಿ: ರತನ್ ಟಾಟಾ ನಿಧನಕ್ಕೆ ಸ್ನೇಹಿತೆ ಸಿಮಿ ಭಾವುಕ ಪೋಸ್ಟ್

Industrialist Ratan Tata  No More, Simi Garewal- Ratan Tata Love Story, Ratan Tata Love Life

Sampriya

ನವದೆಹಲಿ , ಗುರುವಾರ, 10 ಅಕ್ಟೋಬರ್ 2024 (11:51 IST)
Photo Courtesy X
ನವದೆಹಲಿ: ದೇಶದ ಪ್ರತಿಷ್ಟಿತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಬಾಲಿವುಡ್‌ನ ಹಿರಿಯ ನಟಿ, ಸ್ನೇಹಿತೆ ಸಿಮಿ ಗರೆವಾಲ್ ಅವರು ಕಂಬನಿ ಮಿಡಿದಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಟೋವೊಂದನ್ನು ಹಂಚಿ ತಮ್ಮ ಗೆಳೆಯನ ಬಗ್ಗೆ ಭಾವುಕ ಮಾತುಗಳನ್ನಾಡಿದ್ದಾರೆ. 'ಅವರು ಹೇಳುತ್ತಾರೆ ನೀವು ವಿಧಿವಶರಾದರೆಂದು. ನಿಮ್ಮ ನಷ್ಟವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ, ವಿದಾಯ ನನ್ನ ಸ್ನೇಹಿತ ರತನ್ ಟಾಟಾ' ಎಂದು ಬರೆದುಕೊಂಡಿದ್ದಾರೆ.

ಉದ್ಯಮಿ ರತನ್ ಟಾಟಾ ಹಾಗೂ ಬಾಲಿವುಡ್ ನಟಿ ಸಿಮಿ ಅವರು ಪ್ರೀತಿಸುತ್ತಿದ್ದರು.  ಇವರಿಬ್ಬರ ನಡುವಿನ ಸಂಬಂಧ ಭಾರೀ ಸುದ್ದಿಯಲ್ಲಿತ್ತು. ಆದರೆ ಇವರಿಬ್ಬರ ಸ್ನೇಹ ಮದುವೆಯಾಗುವವರೆಗೂ ಉಳಿದಿಲ್ಲ. ಸಿಮಿ ಅವರು ಬೇರೆಯವರನ್ನು ಮದುವೆಯಾದರು. ಆದರೆ ರತನ್ ಹಾಗೂ ಸಿಮಿ ಆತ್ಮೀಯ ಗೆಳೆಯರಾಗಿಯೇ ಇದ್ದರು.

ರತನ್ ಟಾಟಾ(86) ದೀರ್ಘಕಾಲದ ಅನಾರೋಗ್ಯದಿಂದ ಬುಧವಾರ ರಾತ್ರಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.  ಪದ್ಮವಿಭೂಷಣ ಪುರಸ್ಕೃತರಾದ ರತನ್ ಟಾಟಾ ಅವರು ಸಾಟಿಯಿಲ್ಲದ ಸಾಧನೆಗಳ ಪರಂಪರೆಯನ್ನು ಹೊಂದಿದ್ದಾರೆ. ಹಲವು ಬಾರಿ ಪ್ರೀತಿಯಲ್ಲಿ ಬಿದ್ದ ರತನ್ ಟಾಟಾ ಅವರು ಬ್ಯಾಚುಲರ್ ಆಗಿಯೇ ಜೀವನ ಕಳೆದರು. "

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಮನೆಯಲ್ಲಿ ತನ್ನಷ್ಟಕ್ಕೆ ಒಡೆಯುತ್ತಿದೆ ತಟ್ಟೆಗಳು, ಸ್ಪರ್ಧಿಗಳ ಎದೆಯಲ್ಲಿ ಢವಢವ