Select Your Language

Notifications

webdunia
webdunia
webdunia
webdunia

ರಾಮ್ ಚರಣ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯ್ತು ಫಿಲಂಫೇರ್ ನ ಈ ಪೋಸ್ಟ್

ರಾಮ್ ಚರಣ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯ್ತು ಫಿಲಂಫೇರ್ ನ ಈ ಪೋಸ್ಟ್
ಹೈದರಾಬಾದ್ , ಗುರುವಾರ, 6 ಆಗಸ್ಟ್ 2020 (11:05 IST)
ಹೈದರಾಬಾದ್ : ಫಿಲಂಫೇರ್  ಟ್ವೀಟರ್ ನಲ್ಲಿ ಟಾಲಿವುಡ್ ನ ಖ್ಯಾತ ನಟ ರಾಮ್ ಚರಣ್ ಅವರ ವಿಡಿಯೋವೊಂದನ್ನು ಪೋಸ್ಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಫಿಲಂಫೇರ್  ತನ್ನ ಟ್ವೀಟರ್ ಖಾತೆಯಲ್ಲಿ ಸಿನಿಮಾ ಬಗ್ಗೆ , ನಟ ನಟಿಯರ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದೆ. ಆದರೆ ಹೆಚ್ಚಾಗಿ ಬಾಲಿವುಡ್ ಬಗ್ಗೆಯೇ ಮಾಹಿತಿ ನೀಡುತ್ತಿದ್ದ ಫಿಲಂಪೇರ್ ಇದೀಗ ಟಾಲಿವುಡ್ ನ ಖ್ಯಾತ ನಟ ರಾಮ್ ಚರಣ್ ಅವರು ಮಗುವಿನ ಜೊತೆ ಕುಣಿಯುತ್ತಿದ್ದ ವಿಡಿಯೋವನ್ನು ಪೋಸ್ಟ್ ಮಾಡಿ ತಮ್ಮ ಮಗುವಿನೊಂದಿಗೆ ಕುಣಿದ ನಟ ರಾಮ್ ಚರಣ್ ತೇಜ  ಎಂದು ಕ್ಯಾಪ್ಷನ್ ನೀಡಿದ್ದಾರೆ.

ಇದು ಎಡವಟ್ಟಿಗೆ ಕಾರಣವಾಗಿದ್ದು, ಆ ಮಗು  ರಾಮ್ ಚರಣ್ ಅವರದ್ದಾಗಿರಲಿಲ್ಲ ಬದಲಿಗೆ ಅವರ ತಂಗಿಯ ಮಗುವಾಗಿದೆ. ಇದು ರಾಮ್ ಚರಣ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ ಹಿನ್ನಲೆಯಲ್ಲಿ ಅದನ್ನು ಫಿಲಂಫೇರ್ ತೆಗೆದುಹಾಕಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗಲಿದ್ದಾರಾ ನಟಿ ಕೀರ್ತಿ ಸುರೇಶ್ ?