Select Your Language

Notifications

webdunia
webdunia
webdunia
webdunia

’ಹೆಬ್ಬುಲಿ’ ಪ್ರದರ್ಶನ ಕಾಣುತ್ತಿದ ಚಿತ್ರಮಂದಿರಕ್ಕೆ ಹಾನಿ

’ಹೆಬ್ಬುಲಿ’ ಪ್ರದರ್ಶನ ಕಾಣುತ್ತಿದ ಚಿತ್ರಮಂದಿರಕ್ಕೆ ಹಾನಿ
Bangalore , ಗುರುವಾರ, 23 ಫೆಬ್ರವರಿ 2017 (22:18 IST)
ಶಿವಮೊಗ್ಗದಲ್ಲಿ ಎರಡು ಚಿತ್ರಮಂದಿರಗಳಲ್ಲಿ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರ ಬಿಡುಗಡೆಯಾಗಿದೆ. ಗೋಪಿ ಸರ್ಕಲ್ ಬಳಿಯ ಎಚ್‌ಪಿಸಿಯಲ್ಲಿ ಮುಂಜಾನೆ ಎರಡು ಗಂಟೆಗೆ ಅಭಿಮಾನಿಗಳ ಶೋ ಇತ್ತು. ಆ ನಂತರ 6 ಗಂಟೆಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಗಿದೆ.
 
ಈ ಸಂದರ್ಭದಲ್ಲಿ ಚಿತ್ರಮಂದಿರದ ಒಳಗಿನ ಸೂಚನಾ ಫಲಕ ಹಾಗೂ ಗಾಜುಗಳು ಚೂರಾಗಿವೆ. ನಗರದ ಮಂಜುನಾಥ ಥಿಯೇಟರ್‌ನಲ್ಲೂ ಸಿನಿಮಾ ಬಿಡುಗಡೆಯಾಗಿ ಹೌಸ್‌ಫುಲ್ ಆಗಿದೆ. ಇನ್ನು ಸಾಗರದ ಶ್ರೀ ಸಿನಿಮಾ ಮಂದಿರ, ಶಿರಾಳಕೊಪ್ಪದ ಮಾರುತಿ, ಶಿಕಾರಿಪುರದ ಮಾಲತೇಶ ಚಿತ್ರಮಂದಿರಗಳಲ್ಲಿ ಸಹ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ.
 
ಸುದೀಪ್‌ಗೆ ಇದೇ ಮೊದಲ ಬಾರಿ ಅಮಲಾ ಪೌಲ್ ನಾಯಕಿಯಾಗಿದ್ದಾರೆ. ಪಾತ್ರವರ್ಗದಲ್ಲಿ ಕಬೀರ್ ದುಹಾನ್ ಸಿಂಗ್, ರವಿಶಂಕರ್, ರವಿಕಿಶನ್, ಸಂಪತ್ ರಾಜ್ ಮತ್ತು ಅವಿನಾಶ್ ಮುಂತಾದವರಿದ್ದಾರೆ. ಸುದೀಪ್‌ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಣ್ಣನಾಗಿ ಕಾಣಿಸಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೂಪರ್ ಜೋಡಿಯಲ್ಲಿ “ಒಳ್ಳೆ ಹುಡುಗ ಪ್ರಥಮ್”