Select Your Language

Notifications

webdunia
webdunia
webdunia
webdunia

ಸೂಪರ್ ಜೋಡಿಯಲ್ಲಿ “ಒಳ್ಳೆ ಹುಡುಗ ಪ್ರಥಮ್”

ಸೂಪರ್ ಜೋಡಿಯಲ್ಲಿ  “ಒಳ್ಳೆ ಹುಡುಗ ಪ್ರಥಮ್”
Bangalore , ಗುರುವಾರ, 23 ಫೆಬ್ರವರಿ 2017 (19:10 IST)
ಸೂಪರ್ ಜೋಡಿಯಲ್ಲಿ ಪ್ರತಿ ವಾರ ಸೆಲಬ್ರಿಟಿಗಳು ಆಗಮಿಸುತ್ತಿದ್ದಾರೆ. ಅಂತೆಯೇ ಈ ವಾರವೂ ಜನ-ಮನ ಗೆದ್ದ ಒಳ್ಳೆ ಹುಡುಗ ಪ್ರಥಮ್ ಎಂಟ್ರಿ ಕೊಟ್ಟಿದ್ದಾರೆ. ಬರೀ ಕಿರಿಕ್‍ನಲ್ಲೇ ಹೆಸರಾಗಿದ್ದ ಪ್ರಥಮ್ ಮತ್ತು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಜೋಡಿ ಸೂಪರ್ ಜೋಡಿಯಲ್ಲಿ ತಮ್ಮ ಜೀವನದ ಸಿಹಿ ಕಹಿ ಕ್ಷಣಗಳನ್ನ ಹಂಚಿಕೊಂಡು ಮನದಾಳದ ಮಾತುಗಳ ಮೂಲಕ ಒಬ್ಬರನ್ನ ಒಬ್ಬರು ಅಪ್ಪಿ ಖುಷಿ ಪಟ್ಟ ಅದ್ಬುತ ಸ್ವಾರಸ್ಯಕರ ಸಂಗತಿ ಈ ವಾರದ ಸಂಚಿಕೆಯಲ್ಲಿದೆ.
 
ಒಳ್ಳೆ ಹುಡುಗ ಪ್ರಥಮ್‍ನ ಹೊಗಳಿದ ವೆಂಕಟ್ ಎಲ್ಲರನ್ನು ತಬ್ಬಿಬ್ಬಾಗುವಂತೆ ಮಾಡಿದ್ದಾರೆ. ಇವರೀರ್ವರ ಗೆಳತನದ ಬಗೆಗೆ ಸಂತಸ ವ್ಯಕ್ತ ಪಡೆಸಿದ ಸೂಪರ್ ಜೋಡಿಗಳು ಹರ್ಷೋದ್ಗಾರದಿಂದ ಅವರ ಗೆಳತನವನ್ನು ಕೊಂಡಾಡಿದರು. 
 
ತಮ್ಮ ಪ್ರೀತಿಯ ದ್ಯೋತಕವಾಗಿ ಈ ಜೋಡಿಗಳುಒಂದಿಷ್ಟು  ಹೆಜ್ಜೆ ಹಾಕಿ ಎಲ್ಲರನ್ನು ರಂಜಿಸಿದ್ದಾರೆ. ಹಾಗೆ ಪ್ರಥಮ್ ಎಲ್ಲಾ ಜೋಡಿಗಳಿಗೆ ಶುಭಕೋರಿ ಸೂಪರ್ ಜೋಡಿ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡೆಸಿದ್ದಾರೆ. ಹಾಗೆ ಈ ವಾರ ಹಗ್ಗ ಜಗ್ಗಾಟ ಮತ್ತು ಅಡುಗೆಯ ಟಾಸ್ಕ್‌ನಲ್ಲಿ ಈ ಸೂಪರ್ ಜೋಡಿಗಳು ಎಲ್ಲರನ್ನು ಮನರಂಜಿಸಿದ್ದಾರೆ. 
 
ಅಂತಿಮವಾಗಿ ಉಳಿದ 7 ಜೋಡಿಗಳ ಮಧ್ಯೆ ಯಾರು ಎಲಿಮಿನೇಶನ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.  ಸೂಪರ್ ಜೋಡಿ ಸೀಸನ್ 2 ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ  ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್ ಅಭಿನಯದ ’ಹೆಬ್ಬುಲಿ’ ಚಿತ್ರವಿಮರ್ಶೆ