ಕಿಚ್ಚ ಸುದೀಪ ಬದಲು ಈ ವಾರದ ವೀಕೆಂಡ್ ಎಪಿಸೋಡ್‌ಗೆ ಬಂದ ಅತಿಥಿ ಇವರೇ

Sampriya
ಶನಿವಾರ, 26 ಅಕ್ಟೋಬರ್ 2024 (15:54 IST)
Photo Courtesy X
ಬೆಂಗಳೂರು: ಬಿಗ್‌ಬಾಸ್‌ 11 ಸೀಸನ್‌ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಕಿಚ್ಚ ಸುದೀಪ್ ಅವರು ಅನಿವಾರ್ಯ ಕಾರಣಗಳಿಗಷ್ಟೇ ವೀಕೆಂಡ್ ಮಿಸ್‌ ಮಾಡಿದ್ದಾರೆ. ಕಳೆದ ಭಾನುವಾರ ಸುದೀಪ್ ಅವರ ತಾಯಿ ಸರೋಜಾ ಅವರು ವಯೋಸಹಜ ಕಾಯಿಲೆಯಿಂದ ನಿಧನರಾದರು. ಹೀಗಾಗಿ ಈ ವಾರ ಕಿಚ್ಚ ಬಿಗ್‌ಬಾಸ್ ಪಂಚಾಯಿತಿ ಹಾಗೂ ಸಂಡೇ ವಿಥ್ ಸುದೀಪ ಎಫಿಸೋಡ್‌ಗಳನ್ನು ನಡೆಸಿಲ್ಲ.

ಇದೀಗ ಈ ವಾರವನ್ನು ಮುನ್ನಡೆಸಲು ದೊಡ್ಮನೆಗೆ ಯೋಗರಾಜ್ ಭಟ್ ಆಗಮಿಸಿದ್ದಾರೆ. ಈ ಹಿಂದಿನ ಸೀಸನ್‌ನಲ್ಲೂ ಯೋಗರಾಜ್ ಭಟ್ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಆದರೆ ಈ ಬಾರಿ ದಿನಪೂರ್ತಿ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ಜತೆ ಇರುತ್ತಾರಾ ಎಂದು ಕಾದು ನೋಡಬೇಕಿದೆ.

ಕಲರ್ಸ್‌ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ  ವ್ಯವಸ್ಥೆಗಳು, ನಮಸ್ತೆಗಳು, ಸ್ವಗತಗಳು ಎಂದು ತಮ್ಮದೇ ಆದ ಸ್ಟೈಲ್‌ನಲ್ಲಿ ಯೋಗರಾಜ್ ಭಟ್ ಅವರು ಡೈಲಾಗ್ ಹೇಳುತ್ತ ದೊಡ್ಮನೆಗೆ ಎಂಟ್ರಿಯಾಗಿದ್ದಾರೆ. ಇಂದಿನ ಎಪಿಸೋಡ್ ಎಷ್ಟು ಇಂಟ್ರೆಸ್ಟಿಂಗ್ ಆಗಿ ಹೊರಹೊಮ್ಮುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ನಾಳೆ ಡೆವಿಲ್ ತೆರೆಗೆ, ಜೈಲಿನಲ್ಲಿದ್ರೂ ದರ್ಶನ್ ಕೈಬಿಡದ ಕನ್ನಡ ತಾರೆಯರು ಇವರೇ

IMDb 2025 ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು ಪ್ರಕಟ

ನಿನ್ನ ವ್ಯಕ್ತಿತ್ವಕ್ಕೆ ನಾನೇ ನಿನ್ನ ದೊಡ್ಡ ಚಿಯರ್‌ಲೀಡರ್‌: ರುಕ್ಮಿಣಿ ವಸಂತ್‌ಗೆ ಚೈತ್ರಾ ಪ್ರೀತಿಯ ವಿಶ್‌

ಶಿರಡಿ ಸಾಯಿಬಾಬಾಗೆ ಕೊಡುಗೆ ನೀಡಿ, ಕಾರಣ ಬಿಚ್ಚಿಟ್ಟ ಕನಸಿನ ರಾಣಿ ಮಾಲಾಶ್ರೀ

ಮುಂದಿನ ಸುದ್ದಿ
Show comments