Webdunia - Bharat's app for daily news and videos

Install App

ನಾನ್‌ ವೈಲೆನ್ಸ್‌ ಚಿತ್ರಕ್ಕೆ ಹ್ಯಾಟ್ರಿಕ್‌ ಹೀರೊ ಸಾಥ್‌: ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ ಶಿವಣ್ಣ

sampriya
ಗುರುವಾರ, 30 ಮೇ 2024 (16:36 IST)
Non Violence, Shivrajkumar, Metro Shirish,‌
ಬೆಂಗಳೂರು: ಪಂಚಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ʻನಾನ್ ವೈಲೆನ್ಸ್ʼ ಸಿನಿಮಾಕ್ಕೆ ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೊ ಶಿವರಾಜ್ ಕುಮಾರ್  ಸಾಥ್ ನೀಡಿದ್ದಾರೆ. ಚಿತ್ರದ ಫಸ್ಟ್ ಲುಕ್ ಅನ್ನು ಶಿವಣ್ಣ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ʻಮೆಟ್ರೋʼ ಖ್ಯಾತಿಯ ನಿರ್ದೇಶಕ ಆನಂದ್ ಕೃಷ್ಣನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಮೆಟ್ರೋ ಶಿರೀಶ್, ಬಾಬಿ ಸಿಂಹ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತಿದ್ದಾರೆ. ದಿತಿ ಬಾಲನ್, ಗರುಡ ರಾಮ್, ಆದಿತ್ಯ ಕಥಿರ್ ತಾರಾಬಳಗದಲ್ಲಿದ್ದಾರೆ.

ʻನಾನ್ ವೈಲೆನ್ಸ್ʼ ಚಿತ್ರೀಕರಣ ಮುಕ್ತಾಯ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಚಿತ್ರದ ಟೀಸರ್ ಮತ್ತು ಟ್ರೈಲರ್‌ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

90ರ ದಶಕದಲ್ಲಿ ಮಧುರೈ ಜೈಲಿನೊಳಗೆ ಸಂಭವಿಸುವ ಘಟನೆಗಳ ಸುತ್ತ ಸುತ್ತುವ ಒಂದು ಆಕರ್ಷಕ ಚಿತ್ರಕಥೆಯನ್ನು ಆನಂದ್ ರಚಿಸಿದ್ದಾರೆ. ಮೆಟ್ರೋ ಮತ್ತು ಕೊಡಿಯಲ್ಲಿ ಒರುವನ್ ಚಿತ್ರಗಳ ಸತತ ಗೆಲುವಿನ ನಂತರ ನಿರ್ದೇಶಕ ಆನಂದ ಕೃಷ್ಣನ್ ಈ ಚಿತ್ರದ ಮೂಲಕ ಹ್ಯಾಟ್ರಿಕ್ ಯಶಸ್ಸನ್ನು ತಮ್ಮದಾಗಿಸಿಕೊಳ್ಳವ ನಿರೀಕ್ಷೆಯಲ್ಲಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Jayam Ravi: ವಿಚ್ಛೇದನ ವೇಳೆ ಜಯಂ ರವಿ ಪತ್ನಿ ಬೇಡಿಕೆಯಿಟ್ಟಿರುವ ಹಣದ ಮೊತ್ತ ಶಾಕ್ ಆಗುವಂತಿದೆ

ಒಂದು ಬ್ಯಾಡ್ ನ್ಯೂಸ್ ಜೊತೆ ಇನ್ನೊಂದು ಗುಡ್ ನ್ಯೂಸ್ ಕೊಟ್ಟ ವೈಷ್ಣವಿ ಗೌಡ

Yash mother: ಸೊಸೆ ರಾಧಿಕಾ ಪಂಡಿತ್ ನನ್ನ ಮಗನಿಗಿಂತಲೂ ಕಿಲಾಡಿ ಎಂದ ಯಶ್ ತಾಯಿ ಪುಷ್ಪ

ಬಹುಭಾಷಾ ತಾರೆ ರಾಶಿ ಖನ್ನಾ ಮೂಗಿನಲ್ಲಿ ರಕ್ತ ಕಂಡು ಗಾಬರಿಯಾದ ಫ್ಯಾನ್ಸ್‌: ಶೂಟಿಂಗ್‌ ವೇಳೆ ಏನಾಯಿತು

Darshan: ದರ್ಶನ್ ಆಂಡ್ ಗ್ಯಾಂಗ್ ಗೆ ಲಾಭವಾಯ್ತು ಸುಪ್ರೀಂಕೋರ್ಟ್ ನ ಈ ವಿಚಾರ

ಮುಂದಿನ ಸುದ್ದಿ
Show comments