Select Your Language

Notifications

webdunia
webdunia
webdunia
webdunia

ತಮಿಳಿಗೆ ಎಂಟ್ರಿಕೊಟ್ಟ ಹರ್ಷಿಕಾ ಪೂಣಚ್ಚ: ಕನ್ನಡ ತಾರೆಗೆ ಈಗ ರಜನಿಕಾಂತ್ ಜತೆ ನಟಿಸುವಾಸೆ

ಹರ್ಷಿಕಾ ಪೂಣಚ್ಚ
ಬೆಂಗಳೂರು , ಭಾನುವಾರ, 27 ಜನವರಿ 2019 (09:20 IST)
ಬೆಂಗಳೂರು: ಅಪ್ಪಟ ಕನ್ನಡತಿ, ಕೊಡಗಿನ ಚೆಲುವೆ ಹರ್ಷಿಕಾ ಪೂಣಚ್ಚ ಈಗ ತಮಿಳು ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.


ಹರ್ಷಿಕಾಗೆ ತಮಿಳು ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುವ ಅವಕಾಶ ಬಂದಿದೆ. ಹಾಶಿಂ ಮರಿಕರ್ ನಿರ್ದೇಶನದ ಚಿತ್ರಕ್ಕೆ ಉನ್ ಕಥಲಿರುಂದಾಲ್ ಎಂದು ಹೆಸರಿಡಲಾಗಿದೆ. ಪ್ರಮುಖ ಪಾತ್ರ ನಿಭಾಯಿಸಲಿರುವ ಹರ್ಷಿಕಾ ಈಗ ಭಾರೀ ಖುಷಿಯಾಗಿದ್ದಾರೆ.

ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ವಿಜಯ್ ಸೇತುಪತಿ ಟ್ರೈಲರ್ ಬಿಡುಗಡೆ ಮಾಡಲಿದ್ದಾರಂತೆ. ತಮಿಳು ಸಿನಿಮಾಗೆ ಇದೇ ಮೊದಲ ಬಾರಿಗೆ ಎಂಟ್ರಿ ಕೊಟ್ಟಿರುವ ಹರ್ಷಿಕಾ ಇದು ನನ್ನ ಜೀವನದ ಪ್ರಮುಖ ಗಳಿಗೆ ಎಂದಿದ್ದಾರೆ. ನನ್ನ ಆರಾಧ್ಯ ದೈವ ರಜನೀಕಾಂತ್ ಸರ್, ತಲಾ ಅಜಿತ್ ಸರ್ ಜತೆಗೆ ಮುಂದೊಂದು ದಿನ ನಟಿಸುವ ಗಳಿಗೆಗಾಗಿ ಎದುರು ನೋಡುತ್ತಿದ್ದೇನೆ ಎಂದು ಆಸೆ ಹೊರಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರ ಹೃದಯ ಚೂರು ಮಾಡಿದ ‘ಅಗ್ನಿಸಾಕ್ಷಿ’ ಸಿದ್ಧಾರ್ಥ್!