Webdunia - Bharat's app for daily news and videos

Install App

ವಸಿಷ್ಠ ಸಿಂಹ-ಹರಿಪ್ರಿಯಾ ನಡುವೆ ಪ್ರೀತಿ ಹುಟ್ಟಲು ಕಾರಣವಾಗಿದ್ದು ಒಂದು ನಾಯಿ!

Webdunia
ಬುಧವಾರ, 7 ಡಿಸೆಂಬರ್ 2022 (08:50 IST)
Photo Courtesy: Twitter
ಬೆಂಗಳೂರು: ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದ್ದು ಹೇಗೆ ಎಂಬುದನ್ನು ಹರಿಪ್ರಿಯಾ ಕತೆಯಂತೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಹರಿಪ್ರಿಯಾ ಬಳಿ ಲಕ್ಕಿ ಮತ್ತು ಹ್ಯಾಪಿ ಎಂಬ ಎರಡು ನಾಯಿಗಳಿವೆ. ಅವರ ಜೊತೆಗಾರನಾಗಿ ಕ್ರಿಸ್ಟಲ್ ಎನ್ನುವ ನಾಯಿ ಮರಿಯನ್ನು ವಸಿಷ್ಠ ಸಿಂಹ ಉಡುಗೊರೆಯಾಗಿ ನೀಡುತ್ತಾರೆ. ಲಕ್ಕಿ, ಹ್ಯಾಪಿ ಮತ್ತು ಕ್ರಿಸ್ಟಲ್ ನಡುವೆ ಸ್ನೇಹ ಬೆಳೆಯಲು ಕೆಲವು ಸಮಯ ಹಿಡಿತು. ಕ್ರಿಸ್ಟಲ್ ತಮ್ಮ ಆಟಿಕೆಗಳಲ್ಲಿ ಆಡುತ್ತಾನೆ ಎಂದಾಗ ಲಕ್ಕಿ, ಹ್ಯಾಪಿಗೆ ಸಿಟ್ಟು ಬರುತ್ತಿತ್ತು. ಆದರೆ ಈಗ ಇಬ್ಬರೂ ಒಟ್ಟಿಗೇ ಆಡುತ್ತಾರೆ, ಒಟ್ಟಿಗೇ ಮಲಗಿ ನಿದ್ರಿಸುತ್ತಾರೆ.

ಈ ನಾಯಿಯನ್ನು ನನಗೆ ಗಿಫ್ಟ್ ಮಾಡಿದ್ದು ನಿಮ್ಮ ಪ್ರೀತಿಯ ಸಿಂಹ. ಈ ನಾಯಿಯನ್ನು ಗಿಫ್ಟ್ ಮಾಡಿದಾಗ ಅವನು ಒಂದು ಮೆಸೇಜ್ ತಂದಿದ್ದಾನೆ ಗೊತ್ತಿರಲಿಲ್ಲ. ಅವನ ಹೊಟ್ಟೆಯಲ್ಲಿ ಒಂದು ಬರ್ತ್ ಮಾರ್ಕ್ ಇದೆ. ಇದು ಹಾರ್ಟ್ ಸಿಂಬಲ್ ನಲ್ಲಿದೆ. ನಮ್ಮಿಬ್ಬರ ಸಂಬಂಧಕ್ಕೆ ಇವನು ಕನ್ನಡಿ ಹಿಡಿದಿದ್ದಾನೆ’ ಎಂದು ಹರಿಪ್ರಿಯಾ ಹೇಳಿದ್ದಾರೆ.

ಈ ಮೊದಲು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ನಡುವೆ ತೆಲುಗು ಸಿನಿಮಾ ಸೆಟ್ ನಲ್ಲಿ ಪ್ರೀತಿ ಅರಳಿರಬಹುದು ಎನ್ನಲಾಗಿತ್ತು. ಆದರೆ ಈಗ ಹರಿಪ್ರಿಯಾ ತಮ್ಮ ನಡುವೆ ಪ್ರೀತಿ ಹುಟ್ಟಲು ನಿಜವಾದ ಕಾರಣ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments