Publish Date: Wed, 28 Aug 2019 (09:49 IST)
Updated Date: Wed, 28 Aug 2019 (10:11 IST)
ಬೆಂಗಳೂರು: ಖಾಸಗಿ ವಾಹಿನಿಯೊಂದು ತನ್ನ ಮದುವೆ ವಿಚಾರವನ್ನು ವರದಿ ಮಾಡಿ ಪ್ರಸಾರ ಮಾಡಿದ್ದಕ್ಕೆ ನಟಿ ಹರಿಪ್ರಿಯಾ ಪ್ರತಿಕ್ರಿಯೆ ನೀಡಿದ್ದಾರೆ.
ಖಾಸಗಿ ವಾಹಿನಿಯೊಂದು ಸದ್ಯದಲ್ಲೇ ಹರಿಪ್ರಿಯಾ ಮದುವೆ ಆಗ್ತಾರೆ. ವರ ಯಾರು ಗೊತ್ತೇ ಎಂದು ವಿಶೇಷ ವರದಿ ಮಾಡಿತ್ತು. ಹರಿಪ್ರಿಯಾ ಇತ್ತೀಚೆಗೆ ಮದುವೆ ಬಗ್ಗೆ, ಬ್ರೇಕ್ ಬಗ್ಗೆ ನೀಡಿದ ಹೇಳಿಕೆಯನ್ನೇ ಆಧರಿಸಿ ವರದಿ ಪ್ರಸಾರವಾಗಿತ್ತು.
ಇದನ್ನು ನೋಡಿ ಹೌಹಾರಿರುವ ಹರಿಪ್ರಿಯಾ, ‘ಅಯ್ಯೋ.. ಸದ್ಯಕ್ಕೆ ನಾನು ಮದುವೆ ಆಗ್ತಿಲ್ಲ. ನಾನು ನನ್ನ ವೈವಿದ್ಯಮಯ ಪಾತ್ರವನ್ನು ಎಂಜಾಯ್ ಮಾಡ್ತಿದ್ದೀನಿ. ಮುಖ್ಯವಾಗಿ ಮದುವೆ ಆಗೋದಿಕ್ಕೆ ಸಂಗಾತಿ ಬೇಕು. ನನಗೆ ಇನ್ನೂ ನನ್ನ ಸಂಗಾತಿ ಸಿಕ್ಕಿಲ್ಲ. ನನ್ನ ಗಮನವೆಲ್ಲಾ ಕೆಲಸದ ಕಡೆಗೆ ಮಾತ್ರ ಇದೆ. ಆದರೆ ಇದನ್ನು ನೋಡಿದ ಮೇಲೆ ಇನ್ನು ನಾನು ನನ್ನ ಸಂಗಾತಿ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕಿದೆ’ ಎಂದು ಹರಿಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.