Select Your Language

Notifications

webdunia
webdunia
webdunia
webdunia

ಕೇರಳ ಕಾಂಗ್ರೆಸ್ ಯುವ ನಾಯಕನ ಮೇಲೆ ಇದೆಂಥಾ ಆರೋಪ, ನಟಿ ದೂರಿಗೆ ಪಕ್ಷ ಶಾಕ್‌

ಕೇರಳ ಶಾಸಕ ಮಾಮಕೂಟತಿಲ್

Sampriya

ಕೇರಳ , ಗುರುವಾರ, 21 ಆಗಸ್ಟ್ 2025 (14:52 IST)
Photo Credit X
ಕೇರಳ: ನಟಿ ರಿನಿ ಜಾರ್ಜ್‌ ಅವರು ಕೇರಳದ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತಿಲ್ ಅವರು ವಿರುದ್ಧ ಅನುಚಿತ ವರ್ತನೆ ಸಂಬಂಧ ದೂರು ನೀಡಿದ ಬೆನ್ನಲ್ಲೇ ತನಿಖೆ ಚುರುಕುಗೊಂಡಿದೆ. 

ಆರೋಪ ಸಂಬಂಧ ಶಾಸಕ ತನಿಖೆಯನ್ನು ಎದುರಿಸುತ್ತಿದ್ದಾರೆ. 

ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಸಿಪಿಐ(ಎಂ) ಸಂಯೋಜಿತ ಯುವ ಸಂಘಟನೆ ಡಿವೈಎಫ್‌ಐಯು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಮಕೂಟತಿಲ್ ವಿರುದ್ಧ ಆರೋಪ ಮಾಡಿದ್ದಾರೆ. ಇವರೇ ನಟಿಗೆ ಕಿರುಕುಳ ನೀಡಿರುವುದಾಗಿ ದೂರಿದೆ. 


ತಿರುವನಂತಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಸತೀಸನ್, ದೂರುದಾರರು ತನಗೆ ಮಗಳಿದ್ದಂತೆ.

"ಕೇವಲ ಸಂದೇಶವನ್ನು ಆಧರಿಸಿ ನಾವು ಯಾರನ್ನಾದರೂ ಶಿಕ್ಷಿಸಲು ಸಾಧ್ಯವಿಲ್ಲ. ಈಗ ಗಂಭೀರವಾದ ದೂರು ಬಂದಿದೆ. ಪಕ್ಷವು ಅದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತದೆ" ಎಂದು ಅವರು ಹೇಳಿದರು.

ಕೇರಳ ವಿಧಾನಸಭೆಯಲ್ಲಿ ಪಾಲಕ್ಕಾಡ್ ಪ್ರತಿನಿಧಿಸುವ ಮಮಕೂಟತಿಲ್ ವಿರುದ್ಧದ ಆರೋಪಗಳ ಬಗ್ಗೆ ಕೇಳಿ ಬಂದಿದೆಯಾ ಎಂದು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಮಕೂಟತಿಲ್ ಅವರ ಹೆಸರನ್ನು ಉಲ್ಲೇಖಿಸದೆ, ನಿರ್ಧಾರ ತೆಗೆದುಕೊಳ್ಳುವ ಮೊದಲು ಯುವ ಕಾಂಗ್ರೆಸ್ ನಾಯಕನ ಮಾತುಗಳನ್ನು ಸಹ ಕೇಳಬೇಕು ಎಂದು ಸತೀಶನ್ ಹೇಳಿದರು.

"ಪಕ್ಷಕ್ಕೆ ಕಾರ್ಯವಿಧಾನಗಳಿವೆ, ನಾವು ದೂರಿನ ಗಂಭೀರತೆಯನ್ನು ಪರಿಗಣಿಸುತ್ತೇವೆ ಮತ್ತು ಕಾರ್ಯನಿರ್ವಹಿಸುವ ಮೊದಲು ಇನ್ನೊಂದು ಬದಿಯನ್ನು ಆಲಿಸುತ್ತೇವೆ" ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸತೀಶನ್ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇಗೆ ಪುರುಸೊತ್ತಿಲ್ಲ ಎಂದ ಡಾಲಿ ಧನಂಜಯ್: ಬಡವರ ಮಕ್ಕಳು ಈಗ ಕೈಗೇ ಸಿಗಲ್ಲ ಎಂದ ಫ್ಯಾನ್ಸ್