Select Your Language

Notifications

webdunia
webdunia
webdunia
webdunia

ಧ್ರುವ ಸರ್ಜಾ ಫ್ಯಾನ್ಸ್ ಗೆ ಇಂದು ಎರಡೂವರೆ ವರ್ಷದ ಬಳಿಕ ಹಬ್ಬ

Dhruva Sarja

Krishnaveni K

ಬೆಂಗಳೂರು , ಶುಕ್ರವಾರ, 24 ಮೇ 2024 (11:30 IST)
Photo Courtesy: Twitter
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಲ್ಲೇ ಹೋದರೂ ಜನ ಮಾರ್ಟಿನ್ ಅಪ್ ಡೇಟ್ ಯಾವಾಗ ಎಂದು ಕಳೆದ ಎರಡೂವರೆ ವರ್ಷಗಳಿಂದ ಕೇಳುತ್ತಲೇ ಇದ್ದರು. ಇಂದು ಅಭಿಮಾನಿಗಳ ಬಹುದಿನಗಳ ಪ್ರಶ್ನೆಗೆ ಉತ್ತರ ಸಿಗಲಿದೆ.

ಮಾರ್ಟಿನ್ ಸಿನಿಮಾದ ಬಗ್ಗೆ ಹೊಸ ಅಪ್‍ ಡೇಟ್ ಒಂದನ್ನು ಇಂದು ನೀಡುವುದಾಗಿ ಧ‍್ರುವ ಸರ್ಜಾ ಮೊನ್ನೆಯೇ ಇನ್ ಸ್ಟಾಗ್ರಾಂ ಪುಟದಲ್ಲಿ ಘೋಷಿಸಿದ್ದರು. ಇದು ಕೇವಲ ಧ್ರುವ ಸರ್ಜಾ ಅಭಿಮಾನಿಗಳು ಮಾತ್ರವಲ್ಲ, ಸ್ಯಾಂಡಲ್ ವುಡ್ ಅಭಿಮಾನಿಗಳಲ್ಲೇ ಹಬ್ಬದ ವಾತಾವರಣ ಸೃಷ್ಟಿಸಿದೆ.

ಯಾಕೆಂದರೆ ಕಳೆದ ಡಿಸೆಂಬರ್ ನಲ್ಲಿ ಕಾಟೇರ ಸಿನಿಮಾ ಬಿಡುಗಡೆಯಾಗಿದ್ದು ಬಿಟ್ಟರೆ ಕನ್ನಡ ಚಿತ್ರರಂಗದಲ್ಲಿ ಯಾವುದೇ ಸ್ಟಾರ್ ನಟರ ಸಿನಿಮಾ ಬಿಡುಗಡೆಯಾಗಿಲ್ಲ. ಬರೋಬ್ಬರಿ 6 ತಿಂಗಳ ಬಳಿಕ ಒಬ್ಬ ಸ್ಟಾರ್ ನಟನ ಸಿನಿಮಾ ಬಗ್ಗೆ ಅಪ್ ಡೇಟ್ ಕೇಳಿಬರುತ್ತಿದೆ. ಇದು ಕನ್ನಡ ಚಿತ್ರರಂಗಕ್ಕೇ ಖುಷಿಯ ವಿಚಾರವಾಗಿದೆ.

ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗದೇ ಚಿತ್ರಮಂದಿರಗಳೇ ಬಂದ್ ಮಾಡುವ ಪರಿಸ್ಥಿತಿಯಲ್ಲಿರುವಾಗ ಧ್ರುವ ಸರ್ಜಾ ಮಾರ್ಟಿನ್ ಸಿನಿಮಾ ಬಗ್ಗೆ ಅಪ್ ಡೇಟ್ ಕೊಡುತ್ತಿದ್ದಾರೆ. ಚಿತ್ರ ಈಗಾಗಲೇ ಶೂಟಿಂಗ್, ಡಬ್ಬಿಂಗ್ ಮುಗಿಸಿದೆ. ಹೀಗಾಗಿ ಈಗ ಬಿಡುಗಡೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಮಾರ್ಟಿನ್ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾವಾಗಿದ್ದು, ಎಪಿ ಅರ್ಜುನ್ ನಿರ್ದೇಶನ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯಿಂದ ಬಿಡುಗಡೆಯಾದ ಶಾರುಖ್ ಖಾನ್, ನಿಜಕ್ಕೂ ಆಗಿದ್ದೇನು