Select Your Language

Notifications

webdunia
webdunia
webdunia
webdunia

ಮಾದೇವ ಸಕ್ಸಸ್ ಖುಷಿಯಲ್ಲಿದ್ದ ವಿನೋದ್ ಪ್ರಭಾಕರ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮಾದೇವ ಸಿನಿಮಾ ವಿಮರ್ಶೆ

Sampriya

ಬೆಂಗಳೂರು , ಗುರುವಾರ, 17 ಜುಲೈ 2025 (18:46 IST)
Photo Credit X
ಮಾದೇವ ಸಿನಿಮಾ ಸಕ್ಸಸ್ ಬೆನ್ನಲ್ಲೇ ನಟ ವಿನೋದ್ ಪ್ರಭಾಕರ್ ಅವರುನ ತಮ್ಮ ಮುಂದಿನ ಬಹುನಿರೀಕ್ಷಿತ  ಬಲರಾಮನ ದಿನಗಳು ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. 

ಚಿತ್ರ ಸೆಟ್ ಏರಿದ ದಿನದಿಂದಲೂ ಸುದ್ದಿಯಲ್ಲಿರುವ ಬಲರಾಮನಗ ದಿನಗಳು ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಸಕಲೇಶಪುರ ಮುಂತಾದ ಕಡೆ 80 ದಿನಗಳ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಗೊಳ್ಳಲಿದೆ. 

ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರ ಚೊಚ್ಚಲ ನಿರ್ಮಾಣದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರವನ್ನು “ಆ ದಿನಗಳು” ಖ್ಯಾತಿಯ ಕೆ.ಎಂ.ಚೈತನ್ಯ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. 

ಈ ಸಿನಿಮಾದಲ್ಲಿ ವಿನೋದ್ ಪ್ರಭಾಕರ್‌ಗೆ ಪ್ರಿಯಾ ಆನಂದ್ ಜೋಡಿಯಾಗಿ ಅಭಿನಯಿಸಿದ್ದಾರೆ. 

ಹೆಸರಾಂತ ಕಲಾವಿದರಾದ ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ ಅವರಂತಹ ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. “ಬಿಗ್ ಬಾಸ್” ಖ್ಯಾತಿಯ ವಿನಯ್ ಗೌಡ ಸಹ ಈ ಚಿತ್ರದಲ್ಲ ನಟಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಆ ಪಾತ್ರದಲ್ಲಿ ಬೇರೊಬ್ಬರನ್ನು ಊಹಿಸಲು ಸಾಧ್ಯವಿಲ್ಲ: ಕನ್ನಡತಿ ನಿತ್ಯಾ ಮೆನನ್ ಅಭಿನಯವನ್ನು ಕೊಂಡಾಡಿದ ವಿಜಯ್ ಸೇತುಪತಿ