Publish Date: Mon, 22 Nov 2021 (10:28 IST)
Updated Date: Mon, 22 Nov 2021 (10:30 IST)
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಇನ್ನು ದುಃಖದಿಂದ ಹೊರ ಬಂದಿಲ್ಲ.
ಇಂದು ಸಹ ಸಮಾಧಿ ಸ್ಥಳಕ್ಕೆ ಆಗಮಿಸಿ ಅಗಲಿದ ನಟನಿಗೆ ನಮನಗಳಲ್ಲಿ ಸಲ್ಲಿಸಲಾಗುತ್ತದೆ. ಭಾನುವಾರ ಬೆಂಗಳೂರು ಪೊಲೀಸರು ಅಪ್ಪು ಸ್ಮರಣಾರ್ಥ ಸೈಕಲ್ ಜಾಥಾ ನಡೆಸಿದ್ದರು.
ಕಳೆದ ವರ್ಷ ಕೊರೊನಾದಿಂದಾಗಿ ಲಾಲ್ ಬಾಗ್ ನಲ್ಲಿ ನಡಯುವ ಫಲಪುಷ್ಟ ಪ್ರದರ್ಶನ ರದ್ದುಗೊಂಡಿತ್ತು. ಕೊರೊನಾ ಪಸರಿಸುವ ಪ್ರಮಾಣ ಕಡಿಮೆಯಾದ ಹಿನ್ನೆಲೆ ಜನವರಿಯಲ್ಲಿ ಫಲಪುಷ್ಟ ಪ್ರದರ್ಶನ ನಡೆಯಲಿದೆ. ಈ ಬಾರಿಯ ಫಲಪುಷ್ಟ ಪ್ರದರ್ಶನ ಅಪ್ಪು ಅಭಿಮಾನಿಗಳಿಗೆ ವಿಶೇಷವಾಗಿರಲಿದೆ.
ಗಣರಾಜ್ಯೋತ್ಸವ ಅಂಗವಾಗಿ ಲಾಲ್ ಬಾಗ್ ನಲ್ಲಿ ಫಲಪುಷ್ಟ ಪ್ರದರ್ಶನ ನಡೆಸಲಾಗುತ್ತದೆ. ಈ ಬಾರಿ ಅಪ್ಪು ಅವರನ್ನ ಫಲಪುಷ್ಟ ಪ್ರದರ್ಶನದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಈ ಬಾರಿ ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಜೀವನ ಚರಿತ್ರೆ ಫಲಪುಷ್ಟಗಳಲ್ಲಿ ಅರಳಲಿದೆ. ಈ ಮೂಲಕ ತಾರೆಗಳಿಗೆ ಲಾಲ್ ಬಾಗ್ ಸಸ್ಯೋದ್ಯಾನ ಪುಷ್ಟ ನಮನ ಸಲ್ಲಿಸಲಿದೆ. ಬಗೆ ಬಗೆಯ ಹೂಗಳಲ್ಲಿ ಇಬ್ಬರು ತಾರೆಯರು ಅರಳಲಿದ್ದಾರೆ.
ಇಬ್ಬರು ತಾರೆಯರಿಗೂ ಪುಷ್ಟ ನಮನ ಸಲ್ಲಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಈ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಸಭೆಗಳು ನಡೆಯುತ್ತಿವೆ. ಪುಷ್ಟಗಳಲ್ಲಿ ಅರಳುವ ಪುನೀತ್ ಮತ್ತು ಡಾ.ರಾಜ್ ಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಖು ಕಾಯುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ಮಂಡಳಿ ಸಹ ಪುನೀತ ನಮನ ಕಾರ್ಯಕ್ರಮ ಆಯೋಜಿಸುವ ಮೂಲಕ ಅಗಲಿದ ಯುವರತ್ನನಿಗೆ ಶ್ರದ್ಧಾಂಜಲಿ ಸಲ್ಲಿಸಿತ್ತು. ಎಲ್ಲ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ಸಹ ಭಾಗಿಯಾಗಿದ್ದರು.