Webdunia - Bharat's app for daily news and videos

Install App

ಮ್ಯಾನ್ ಹೋಲ್ ಗೆ ಬಿದ್ದ ರಮೇಶ್ ಅರವಿಂದ್, ಗೋಲ್ಡನ್ ಸ್ಟಾರ್ ಗಣೇಶ್: ಇದೇನಾಗಿ ಹೋಯ್ತು ಎಂದ ಫ್ಯಾನ್ಸ್

Krishnaveni K
ಗುರುವಾರ, 5 ಡಿಸೆಂಬರ್ 2024 (10:20 IST)
ಬೆಂಗಳೂರು: ನಟ ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಮ್ಯಾನ್ ಹಾಲ್ ಗೆ ಬಿದ್ದಿದ್ದಾರೆ. ಅವರನ್ನು ಎತ್ತಲು ಸಾಕಷ್ಟು ಜನ ಸುತ್ತಲೂ ನೆರೆದಿದ್ದಾರೆ. ಇಂತಹದ್ದೊಂದು ವಿಡಿಯೋವನ್ನು ರಮೇಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆದರೆ ಅಷ್ಟಕ್ಕೇ ಗಾಬರಿಯಾಗಬೇಕಿಲ್ಲ. ಇದೆಲ್ಲಾ ನಡೆದಿರುವುದು ಶೂಟಿಂಗ್ ಗಾಗಿ. ನಟ ರಮೇಶ್ ಅರವಿಂದ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಯುವರ್ಸ್ ಸಿನ್ಸಿಯರ್ಲೀ ರಾಮ್ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ವಿಖ್ಯಾತ್ ಈ ಸಿನಿಮಾದ ನಿರ್ದೇಶಕರು.

ಈ ಸಿನಿಮಾ ಶೂಟಿಂಗ್ ಗಾಗಿ ಇಬ್ಬರನ್ನೂ ಮ್ಯಾನ್ ಹೋಲ್ ಒಳಗೆ ಇಳಿಸಲಾಗಿದೆ. ರಮೇಶ್ ಅರವಿಂದ್ ಸೂಟು ಬೂಟು ಹಾಕಿಕೊಂಡಿದ್ದರೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಸ್ಟೈಲಿಶ್ ಶರ್ಟ್ ನಲ್ಲಿದ್ದಾರೆ. ಇಬ್ಬರೂ ಒಂದೇ ಮ್ಯಾನ್ ಹೋಲ್ ನಲ್ಲಿ ನಿಂತಿರುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗಿದೆ.

ಈ  ವಿಡಿಯೋ ನೋಡಿದ ನೆಟ್ಟಿಗರು ನಟರ ಕಾಲೆಳೆದಿದ್ದಾರೆ. ಒಬ್ಬರು ಮುಂಗಾರು ಮಳೆ ಟೈಮ್ ನಲ್ಲಿ ನಾಯಕ ಪ್ರೀತಂ ವಾಚ್ ಬಿದ್ದಿತ್ತಲ್ಲ, ಅದನ್ನು ಹುಡುಕಲು ಇಳಿದಿರಬೇಕು ಎಂದು ಗಣೇಶ್ ಕಾಲೆಳೆದಿದ್ದಾರೆ. ಇನ್ನೊಬ್ಬರು ಅಲ್ಲೇನು ಮಾಡ್ತಿದ್ದೀರಿ ರಮೇಶ್ ಸರ್ ಎಂದು ತಮಾಷೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments