Select Your Language

Notifications

webdunia
webdunia
webdunia
webdunia

Gold Smuggling Case: ದುಬೈ ಜತೆಗೆ ನಟಿ ರನ್ಯಾ ರಾವ್‌ ಈ ಎಲ್ಲ ದೇಶಕ್ಕೆ ಪದೇ ಪದೇ ಹೋಗುತ್ತಿದ್ದರು

Gold Smuggling Case, Actress Ranya Rao Case, Ranya Rao Step Father Reaction,

Sampriya

ಬೆಂಗಳೂರು , ಶುಕ್ರವಾರ, 7 ಮಾರ್ಚ್ 2025 (17:36 IST)
ಬೆಂಗಳೂರು: ವಿಮಾನ ನಿಲ್ದಾಣದಲ್ಲಿ 12 ಕೋಟಿ ರೂಪಾಯಿ ಮೌಲ್ಯದ 15ಕೆಜಿ ಚಿನ್ನವನ್ನುಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ನಟಿ ರನ್ಯಾ ರಾವ್ ಅವರು ವಿಚಾರಣೆ ವೇಳೆ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ.

15ಕೆಜಿ ಚಿನ್ನವನ್ನು ಪೀಸ್‌ಗಳನ್ನಾಗಿ ಮಾಡಿ, ತನ್ನ ತೊಡೆಗೆ ಟೇಪ್‌ನಿಂದ ಕಟ್ಟಿ, ಚಿನ್ನವನ್ನು ಸಾಗಿಸುತ್ತಿದ್ದ ವೇಳೆ ನಟಿ ಸಿಕ್ಕಿಬಿದ್ದಿದ್ದಾರೆ.  ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ರನ್ಯಾ ಅವರನ್ನು ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಈ ಹಿಂದೆಯೂ ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಅವರ ಈಚೆಗೆ ನಿರಾಕರಣೆ ಹೇಳಿಕೆ ಮತ್ತಷ್ಟು ಕುತೂಹಲವನ್ನು ಮೂಡಿಸಿದೆ.  ತನಿಖಾಧಿಕಾರಿಗಳು ಈಗ ಅವರು ತಿಳಿಯದೆಯೇ ಈ ದಂಧೆಯಲ್ಲಿ ಸಿಕ್ಕಿಬಿದ್ದಿದ್ದಾರೆಯೇ ಅಥವಾ ಕಳ್ಳಸಾಗಣೆ ಜಾಲದಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಲಮಗಳು ರನ್ಯಾ ದುಬೈ, ಯುರೋಪ್, ಅಮೆರಿಕ ಮತ್ತು ಮಧ್ಯಪ್ರಾಚ್ಯಕ್ಕೆ ವ್ಯಾಪಕವಾಗಿ ಪ್ರಯಾಣಿಸಿದ್ದರು ಎಂದು ವರದಿಯಾಗಿದೆ.

 ಈ ಪ್ರಕರಣವು ವ್ಯಾಪಕ ಊಹಾಪೋಹಗಳಿಗೆ ನಾಂದಿ ಹಾಡಿದ್ದು, ಮುಂದಿನ ತನಿಖೆಗಳು ಬಹುಕೋಟಿ ಮೌಲ್ಯದ ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿ ರನ್ಯಾ ಅವರ ಪಾತ್ರದ ಬಗ್ಗೆ ಮತ್ತಷ್ಟು ತಿಳಿದುಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಶುಭಪೂಂಜಾಗೆ ಮಾತೃವಿಯೋಗ: ನನ್ನ ಮುಖದ ನಗು ಮಾಯವಾಯಿತು, ನಟಿ ಭಾವುಕ ಫೋಸ್ಟ್‌