ಬೆಂಗಳೂರು: ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಜತೆ ಈಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಹನಿಮೂನ್ಗೆ ವಿದೇಶಕ್ಕೆ ಹಾರಿದ್ದಾರೆ.
ಪತಿ ಜತೆ ಕಳೆಯುತಿರುವ ಸಂತಸದ ಕ್ಷಣಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಫೋಟೋಗಳಿಗೆ ಕ್ಯಾಪ್ಶನ್ ನೀಡಿದ ಅವರು, Sunset swims , Fiji culture , shark spotting .. we did it all ❤️ ಸೂರ್ಯಾಸ್ತ ವೇಳೆ ಈಜು, ಶಾರ್ಕ್ ಮೀನನ್ನು ನೋಡುವುದು, ಫಿಜಾನ್ ಸಂಸ್ಕೃತಿಯನ್ನು ಎಂಜಾಯ್ ಮಾಡೋದು. ನಾವು ಎಲ್ಲವನ್ನೂ ಏಂಜಾಯ್ ಮಾಡಿದೆವು ಎಂದು ರಕುಲ್ ಬರೆದುಕೊಂಡಿದ್ದಾರೆ.
ಪ್ರೀತಿಯಲ್ಲಿ ಬಿದ್ದ ರಾಕುಲ್ ಹಾಗೂ ಜಾಕಿ ಹಲವು ವರ್ಷಗಳಿಂದ ಡೇಟಿಂಗ್ನಲ್ಲಿದ್ದರು. ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಸದ್ಯ ಹನಿಮೂನ್ಗೆ ತೆರಳಿದ್ದಾರೆ.
ಸದ್ಯ ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ರಾಕುಲ್ ಪ್ರೀತ್ ಅವರು ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾಪರ್ಣೆ ಮಾಡಿದರು.
ಸಾಮಾಜಿಕ ಜಾಲತಾಣದಲ್ಲಿ ಆಗಾಗ ರಾಕುಲ್ ಆಗಾಗ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.