Webdunia - Bharat's app for daily news and videos

Install App

ಬಿಗ್ ಬ್ರೇಕ್ಗಾಗಿ ಕಾಯುತ್ತಿದ್ದಾನೆ ಜಂಟಲ್ಮ್ಯಾನ್

Webdunia
ಸೋಮವಾರ, 3 ಫೆಬ್ರವರಿ 2020 (15:40 IST)
ಅರ್ಜುನ್ ಗೌಡ, ವಿಕ್ರಂ, ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಪ್ರಜ್ವಲ್ ದೇವರಾಜ್ ಜಂಟಲ್ ಮ್ಯಾನ್ ಆಗಿ ತೆರೆ ಮೇಲೆ ಬರಲು ಸಿದ್ದವಾಗಿದ್ದಾರೆ. ದಿನದಲ್ಲಿ ಹದಿನೆಂಟು ಗಂಟೆ ಮಲಗಿರುವ  ಆರು ಗಂಟೆ ಎಚ್ಚರವಿರುವ ಪಾತ್ರವನ್ನು ಡೈನಾಮಿಕ್ ಪ್ರಿನ್ಸ್ ನಿರ್ವಹಿಸಿದ್ದಾರೆ. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್  ಕಾಯಿಲೆ ಇರುವ ವ್ಯಕ್ತಿ ಜೀವನದಲ್ಲಿ ಏನೆಲ್ಲ ಆಗಬಹುದು, ಆತ ಎಚ್ಚರವಿರುವ ಆರು ಗಂಟೆಯಲ್ಲಿ ಆತನ ಜೀವನ ಹೇಗಿರುತ್ತೆ..? ಈ ಇಂಟ್ರಸ್ಟಿಂಗ್ ಎಳೆ ಇಟ್ಟುಕೊಂಡು ಜಂಟಲ್ ಮ್ಯಾನ್ ಕಥೆ ಹೆಣೆಯಲಾಗಿದೆ. 
ಪ್ರಜ್ವಲ್ ಇಮೇಜ್ಗೆ ತಕ್ಕಂತೆ ಚಿತ್ರಕತೆ ಹೆಣೆದಿದ್ದಾರೆ ನಿರ್ದೇಶಕ ಜಡೇಶ್ ಕುಮಾರ್. ಟೀಸರ್ ಹಾಗೂ ಟ್ರೈಲರ್ನಲ್ಲಿ ಡೈನಾಮಿಕ್ ಪ್ರಿನ್ಸ್ ಎಲ್ಲರ ಮನ ಸೆಳೆದಿದ್ದು, ಚಾಲೆಂಜಿಂಗ್ ರೋಲ್ನಲ್ಲಿ ಭರತ್ ಪಾತ್ರದಲ್ಲಿ ನಟಿಸಿದ್ದಾರೆ. ಭರತ್ ಜಂಟಲ್ ಮ್ಯಾನ್ ಆಟ ಫೆಬ್ರವರಿ 7ಕ್ಕೆ  ಆರಂಭವಾಗಲಿದ್ದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಡೈನಾಮಿಕ್ ಪ್ರಿನ್ಸ್. ಒಂದು ಬಿಗ್ ಬ್ರೇಕ್ಗಾಗಿ ಕಾಯುತ್ತಿರುವ ಪ್ರಜ್ವಲ್ ದೇವರಾಜ್ ಈ ಚಿತ್ರದ ಮೂಲಕ ಆ ಗೆಲುವನ್ನು ಪಡೆಯುವ ಎಲ್ಲಾ ಲಕ್ಷಣಗಳು ಚಿತ್ರದಲ್ಲಿವೆ. 
ಜಂಟಲ್ ಮ್ಯಾನ್ ಒಂದು ಪ್ರಯೋಗಾತ್ಮಕ ಚಿತ್ರ ಅಂದ್ರೆ ತಪ್ಪಾಗೋದಿಲ್ಲ. ಜಡೇಶ್ ಕುಮಾರ್ ಚಿತ್ರದ ಸೂತ್ರದಾರ. ಗುರುದೇಶ ಪಾಂಡೆ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಜಿ. ಸಿನಿಮಾಸ್ ಹಾಗೂ ಗುರುದೇಶ ಪಾಂಡೆ ಪ್ರೊಡಕ್ಷನ್ನಲ್ಲಿ ಚಿತ್ರ ತಯಾರಾಗಿದೆ. ನಿಶ್ವಿಕಾ ನಾಯ್ಡು ಚಿತ್ರದ ನಾಯಕಿ ಪಾತ್ರದಲ್ಲಿ ನಟಿಸಿದ್ದು, ಅರುಣಾ ಬಾಲರಾಜ್, ಸಂಚಾರಿ ವಿಜಯ್, ಭರತ್ ಕಲ್ಯಾಣ್, ತಬಲ ನಾಣಿ,ವಿಜಯ್ ಚಂಡೂರ್ ಚಿತ್ರದ ತಾರಬಳಗದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್ ಅಭಿಮಾನಿ ಬಳಗ ಈ ಚಿತ್ರಕ್ಕಾಗಿ ಕಾಯುತ್ತಿದ್ದು ಫೆಬ್ರವರಿ 7ಕ್ಕೆ ಚಿತ್ರ ತೆರೆಗೆ ಬರ್ತಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಮುಂದಿನ ಸುದ್ದಿ
Show comments