Webdunia - Bharat's app for daily news and videos

Install App

ಶಿವರಾಜ್ ಕುಮಾರ್ ಭೈರತಿ ರಣಗಲ್ ರಿಲೀಸ್ ಮುಂದೆ ಹಾಕಲು ಕಾರಣ ಹೇಳಿದ ಗೀತಕ್ಕ

Krishnaveni K
ಮಂಗಳವಾರ, 27 ಆಗಸ್ಟ್ 2024 (09:35 IST)
ಬೆಂಗಳೂರು: ಶಿವರಾಜ್ ಕುಮಾರ್ ನಾಯಕರಾಗಿರುವ ಭೈರತಿ ರಣಗಲ್ ಸಿನಿಮಾ ರಿಲೀಸ್ ಮುಂದೂಡಿಕೆಯಾಗಿದೆ. ಇದಕ್ಕೆ ಕಾರಣವೇನೆಂದೂ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ವಿವರಿಸಿದ್ದಾರೆ.

ಎಲ್ಲಾ ಅಂದುಕೊಂಡಂತೇ ನಡೆದಿದ್ದರೆ ಇದೇ ತಿಂಗಳು ಭೈರತಿ ರಣಗಲ್ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಈಗ ಕೊನೆ ಕ್ಷಣದಲ್ಲಿ ಸಿನಿಮಾ ರಿಲೀಸ್ ಮುಂದೆ ಹಾಕಲಾಗಿದೆ. ಸಿನಿಮಾ ಕೂಡಾ ಕಂಪ್ಲೀಟ್ ಆಗಿದೆ. ಆದರೆ ದಿಡೀರ್ ಆಗಿ ಸಿನಿಮಾ ರಿಲೀಸ್ ಮುಂದೂಡಲಾಗಿದೆ.

ಗೀತಾ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವ ಭೈರತಿ ರಣಗಲ್ ಎಂಬ ಮಾಸ್ ಸಿನಿಮಾ ನವಂಬರ್ 15 ಕ್ಕೆ ಬಿಡುಗಡೆಯಾಗಲಿದೆ ಎಂದು ಘೋಷಣೆ ಮಾಡಲಾಗಿದೆ. ಸಿನಿಮಾ ರಿಲೀಸ್ ಮುಂದೂಡಿಕೆ ಮಾಡಲು ಕಾರಣವೇನೆಂದು ಗೀತಾ ಶಿವರಾಜ್ ಕುಮಾರ್ ವಿವರಿಸಿದ್ದಾರೆ. ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಬೇರೆ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ನಮ್ಮ ಕನ್ನಡ ಸಿನಿಮಾಗಳೇ ರಿಲೀಸ್ ಆಗುತ್ತಿವೆ. ಅವರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ನಮ್ಮ ಸಿನಿಮಾ ರಿಲೀಸ್ ಮುಂದೂಡುತ್ತಿದ್ದೇವೆ ಎಂದಿದ್ದಾರೆ.

ಭೈರತಿ ರಣಗಲ್ ಸಿನಿಮಾ ಈ ಹಿಂದೆ ಶಿವಣ್ಣ ನಾಯಕರಾಗಿ ಬಿಡುಗಡೆಯಾಗಿದ್ದ ಮುಫ್ತಿ ಸಿನಿಮಾದ ಮುಂದುವರಿದ ಭಾಗ. ಮುಫ್ತಿ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು. ಇದೀಗ ಭೈರತಿ ರಣಗಲ್ ಸಿನಿಮಾದ ಮೇಲೂ ಪ್ರೇಕ್ಷಕರು ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಫ್ಯಾನ್‌ಗೆ ಗುಡ್‌ನ್ಯೂಸ್‌, ದಿ ಡೆವಿಲ್ ಶೂಟಿಂಗ್ ಮುಕ್ತಾಯ

ಸೋ ಲಾಂಗ್ ವ್ಯಾಲಿ ಸಿನಿಮಾದ ಪ್ರೀಮಿಯರ್ ಶೋ ವೇಳೆ ನಿರ್ದೇಶಕನಿಗೆ ನಟಿ ರುಚಿ ಗುಜ್ಜರ್ ಕಪಾಳಮೋಕ್ಷ

ತಾನು ನಿಜಜೀವನದಲ್ಲೂ ಹಿರೋಯಿನ್‌ ಎಂದು ಡಿ ಬಾಸ್‌ ಅಭಿಮಾನಿಗಳ ಕಾಲೆಳೆದು, ಮತ್ತೊಂದು ಸವಾಲು ಹಾಕಿದ ರಮ್ಯಾ

ಸು ಫ್ರಮ್ ಸೋ ಶೋ ಕಡಿಮೆಯಾಯ್ತು ಎಂದ ಪ್ರೇಕ್ಷಕರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು

ಸ್ಟಾರ್ ಗಳಿಲ್ಲದಿದ್ದರೂ ಮೊದಲ ದಿನವೇ ಸು ಫ್ರಮ್ ಸೋ ಸಿನಿಮಾ ಭರ್ಜರಿ ಕಲೆಕ್ಷನ್

ಮುಂದಿನ ಸುದ್ದಿ
Show comments