Select Your Language

Notifications

webdunia
webdunia
webdunia
webdunia

ಗಣೇಶ್ ಮತ್ತು ಎಸ್ ನಾರಾಯಣ್ ನಡುವೆ ತಿಕ್ಕಾಟ

ಗಣೇಶ್ ಮತ್ತು ಎಸ್ ನಾರಾಯಣ್ ನಡುವೆ ತಿಕ್ಕಾಟ
Bangalore , ಭಾನುವಾರ, 26 ಫೆಬ್ರವರಿ 2017 (20:08 IST)
ಒಂದು ಕಾಲದಲ್ಲಿ ಕಲಾಸಾಮ್ರಾಟ್ ಎಸ್ ನಾರಾಯಣ್ ಮತ್ತು ಗಣೇಶ್ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಈಗ ಅದು ಸಂಪೂರ್ಣ ಹಳಸಿದೆ. ಒಬ್ಬರಿಗೊಬ್ಬರು ನೋಟೀಸ್ ಕಳುಹಿಸಿಕೊಳ್ಳುವ ಮೂಲಕ ತಮ್ಮ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿಕೊಂಡಿದ್ದಾರೆ.
 
ಮೂಲಗಳ ಪ್ರಕಾರ, ಗಣೇಶ್ ಅವರು ರೂ.75 ಲಕ್ಷ ಪರಿಹಾರಧನ ಕೊಡಬೇಕೆಂದು ನಾರಾಯಣ್‌ಗೆ ನೋಟೀಸ್ ರವಾನಿಸಿದ್ದಾರೆ. ಜಾಹೀರಾತೊಂದರಲ್ಲಿ ತಮ್ಮ ಅನುಮತಿ ಇಲ್ಲದೆ ತನ್ನ ಫೋಟೋ ಬಳಸಿಕೊಂಡಿದ್ದಾರೆ ಎಂಬುದು ಗಣೇಶ್ ಆರೋಪ. ಇದಕ್ಕೆ ತಮಗೆ ಯಾವುದೇ ಹಣ ಸಂದಾಯವಾಗಿಲ್ಲ ಎಂದು ಅವರು ನೋಟೀಸಿನಲ್ಲಿ ತಿಳಿಸಿದ್ದಾರೆ.
 
ಇದಕ್ಕೆ ಪ್ರತಿ ನೋಟೀಸ್ ಕಳುಹಿಸಿರುವ ಎಸ್ ನಾರಾಯಣ್, ತನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದಿದ್ದು, ಮಾನಹಾನಿಯಾಗಿದೆ ಎಂದು ಆರೋಪಿ ರೂ.10 ಕೋಟಿ ಪರಿಹಾರಧನಕ್ಕೆ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಇಬ್ಬರೂ ನೋಟೀಸು ಪ್ರತಿ ನೋಟೀಸುಗಳಿಂದ ಸುದ್ದಿಯಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ನಿರ್ದೇಶನಕ್ಕೆ ಮರಳಿದ ಕ್ರೇಜಿಸ್ಟಾರ್ ರವಿಚಂದ್ರನ್